ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಾಶ್ಮೀರದ ಪಹಲ್ಗಾಮ್‌ಗೆ ಆಗಮಿಸಿದ್ದ ಪ್ರವಾಸಿಗರ ಮೇಲೆ ಮಂಗಳವಾರ ಉಗ್ರರು ದಾಳಿ ನಡೆಸಿ 30ಕ್ಕೂ ಅಧಿಕ ಜನರ ಹತ್ಯೆ ನಡೆಸಿರುವ ಹೇಯ ಕೃತ್ಯವನ್ನು ಲಕ್ಷ್ಮೇಶ್ವರ ಅಂಜುಮನ್ ಏ-ಇಸ್ಲಾಂ ಕಮಿಟಿ ಅಧ್ಯಕ್ಷ ಎಂ.ಎಂ. ಗದಗ ಬಲವಾಗಿ ಖಂಡಿಸಿದ್ದಾರೆ.
Advertisement
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉಗ್ರಗಾಮಿಗಳು ದಾಳಿ ನಡೆಸಿ ಅಮಾಯಕ ಜನರನ್ನು ಬಲಿ ತೆಗೆದುಕೊಂಡಿರುವದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇಂತಹ ಹೇಯ ಕೃತ್ಯ ಮಾಡಿದ ಯಾವುದೇ ಸಂಘಟನೆಯಾಗಿರಲಿ, ಯಾರೇ ಆಗಿರಲಿ ಅವರಿಗೆ ತಕ್ಕ ಶಾಸ್ತಿ ಮಾಡುವ ಮೂಲಕ ಉತ್ತರ ನೀಡಬೇಕಾಗಿದೆ. ಮುಸ್ಲಿಂ ಸಮಾಜ ಈ ಕೃತ್ಯವನ್ನು ಒಪ್ಪುವದಿಲ್ಲ. ಸಮಾಜದ ವತಿಯಿಂದ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಎಂ.ಎಂ. ಗದಗ ಹೇಳಿದ್ದಾರೆ.