ಸೌಲಭ್ಯಕ್ಕೆ ಆಗ್ರಹಿಸಿ ಪೌರಕಾರ್ಮಿಕರ ಮನವಿ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರಾಜ್ಯದ ಎಲ್ಲ ಪೌರಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ನಮಗೂ ಸಿಗುವಂತೆ ಮಾಡಬೇಕೆಂದು ಆಗ್ರಹಿಸಿ ತಾಲೂಕಾ ಪೌರಕಾರ್ಮಿಕರ ಸಂಘದ ವತಿಯಿಂದ ಬುಧವಾರ ತಹಸೀಲ್ದಾರ ಅನಿಲ ಬಡಿಗೇರರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪದಾಧಿಕಾರಿ ಉಡಚಪ್ಪ ನೀಲಣ್ಣವರ, ತಾಲೂಕಾಧ್ಯಕ್ಷ ಹುಚ್ಚಪ್ಪ ಗೋಡೆಣ್ಣವರ, ರಾಜ್ಯದಲ್ಲಿರುವ ಎಲ್ಲಾ ಮಹಾನಗರಪಾಲಿಕೆ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ರಾಜ್ಯ ಸರಕಾರಿ ನೌಕರರೆಂದು ಘೋಷಿಸುವುದು, ಸರಕಾರಿ ನೌಕರರಿಗೆ ದೊರಕುತ್ತಿರುವ ಕೆಜಿಐಡಿ/ಜಿಪಿಎಫ್, ಪೋತಿ, ಸಂಜೀವಿನಿ ಹಾಗೂ ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದುಡಿಯುತ್ತಿರುವ ವಾಟರ್‌ಮನ್/ಕಂಪ್ಯೂಟರ್ ಆಪರೇಟರ್/ವಾಹನ ಚಾಲಕರು/ಬೀದಿ ದೀಪ ನಿರ್ವಹಣೆ ಕಾರ್ಮಿಕರು/ಲೋಡರ್/ ಕ್ಲೀನರ್/ಹೆಲ್ಪರ್/ಸ್ಯಾನಿಟರಿ ಸೂಪರ್‌ವೈಜರ್ ಇನ್ನೂ ಅನೇಕ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಗುತ್ತಿಗೆ ಪದ್ದತಿಯಿಂದ ವಿಮುಕ್ತಿಗೊಳಿಸಬೇಕು. ಒಂದು ವೇಳೆ ಪೌರಕಾರ್ಮಿಕರ ನ್ಯಾಯಸಮ್ಮತ ಬೇಡಿಕೆಗಳಿಗೆ ಸರಕಾರ ಸ್ಪಂದಿಸದೇ ಹೋದರೆ ರಾಜ್ಯ ಸಂಘ ನೀಡಿರುವ ಕರೆಯುಂತೆ ಮೇ.26ರಿಂದ ಅನಿರ್ದಿಷ್ಟ ಮುಷ್ಕರ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಚನ್ನವೀರಯ್ಯ ಹಿರೇಮಠ, ಆನಂದ ಗಂಟಿ, ರಮೇಶ ಕಂಟೆಮ್ಮನವರ, ಉಡಚವ್ವ ಬಡೆಣ್ಣವರ, ಫಕ್ಕಿರೇಶ ಬಂತಿ, ಹನುಮಂತ ಕೊಡ್ಲಿ, ನಾಗೇಶ ಕುಲಕರ್ಣಿ, ದುರ್ಗಪ್ಪ ಗುಡಿಮನಿ, ಮರಿಯಪ್ಪ ಪೂಜಾರ, ಉಮೇಶ ಬಡೆಣ್ಣವರ, ಮರಿಯಪ್ಪ ಗುಡಿಮನಿ, ಲಕ್ಷ್ಮಣ ಮಳ್ಳಣ್ಣವರ, ನೀಲವ್ವ ಗುಡಿಮನಿ, ರತ್ನವ್ವ ಬಡೆಣ್ಣವರ, ಬಸವಣ್ಣೆವ್ವ ಗುಡಿಮನಿ, ಯಲ್ಲವ್ವ ಗೋಡೆಣ್ಣವರ, ದ್ರಾಕ್ಷಾಯಿಣಿ ಕಂಟೆಮ್ಮನವರ, ನಿಂಗವ್ವ ಮರಚಣ್ಣವರ, ಹನಮವ್ವ ಗುಡಿಮನಿ, ಸಾವಕ್ಕ ಗುಡಿಮನಿ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here