ಕುಚುಪುಡಿಯಲ್ಲಿ ಉತ್ತಮ ಸಾಧನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲಾ ವಿಶ್ವವಿದ್ಯಾಲಯವು ಇತ್ತೀಚೆಗೆ ನಡೆಸಿದ ಕುಚುಪುಡಿ ಜೂನಿಯರ್ ಪರೀಕ್ಷೆಯಲ್ಲಿ ಸ್ಥಳೀಯ ವಿದುಷಿ ರಾಘವಿ ಜ್ಯೋತಿಶ್ರೀ ಮತ್ತು ನೇಗಿಲಯೋಗಿ ಸಿಇಒ ಷಡಕ್ಷರಿ ಟಿ.ವಿ ಅವರ ಸುಪುತ್ರಿ ವೈಷ್ಣವಿ ಷಡಕ್ಷರಿ (ಶೇ. 82.5) ಸಾಧನೆ ಮಾಡಿದ್ದಾರೆ.

Advertisement

ಅವರು ನಾಟ್ಯ ಚೂಡಾಮಣಿ ವೈಜಯಂತಿ ಕಾಶಿ ಮತ್ತು ಪ್ರತೀಕ್ಷಾ ಕಾಶಿ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಪ್ರಗತಿ ಸಾಧಿಸಿ ಗದಗ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಕುಚುಪುಡಿ ಜೂನಿಯರ್ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಗಿದ್ದಾರೆ. ಸಾಧನೆ ಮಾಡಿದ ವೈಷ್ಣವಿ ಷಡಕ್ಷರಿ ಅವರಿಗೆ ನಿಮಿಷಾಂಬಾ ನಾಟ್ಯ ಅಕಾಡಮಿಯ ಅಧ್ಯಕ್ಷೆ ರಾಘವಿ ಜ್ಯೋತಿಶ್ರೀ ಹಾಗೂ ಆಡಳಿತ ಮಂಡಳಿ ಅಭಿನಂದಿಸಿದೆ.


Spread the love

LEAVE A REPLY

Please enter your comment!
Please enter your name here