ಧಾರವಾಡ:- ಕ್ಷುಲ್ಲಕ ವಿಚಾರಕ್ಕೆ ಕಿರಿಕ್ ನಡೆಸಿದ ಮುಸ್ಲಿಂ ಯುವಕರು, RSS ಮುಖಂಡನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ಹಳೆ ತಹಸೀಲ್ದಾರ್ ಕಚೇರಿ ಓಣಿಯಲ್ಲಿ ಜರುಗಿದೆ.
ಹಲ್ಲೆಗೊಳಗಾದ ಆರ್ಎಸ್ಎಸ್ ಮುಖಂಡನನ್ನು ಸಿರೀಶ್ ಬಳ್ಳಾರಿ ಎಂದು ಗುರುತಿಸಲಾಗಿದೆ. ಮನೆಯ ಮುಂದೆ ಮುಸ್ಲಿಂ ಯುವಕರು ಸಿಗರೇಟ್ ಸೇದುತ್ತಾ ನಿಂತಿದ್ದರು. ಈ ವೇಳೆ, ಸಿರೀಶ್ ಬಳ್ಳಾರಿಯವರು ದೂರಕ್ಕೆ ಹೋಗಿ ಸಿಗರೇಟು ಸೇದುವಂತೆ ಯುವಕರಿಗೆ ಹೇಳಿದ್ದಾರೆ. ಇಷ್ಟಕ್ಕೆ ಆಕ್ರೋಶಗೊಂಡ ನಾಲ್ವರು ಮುಸ್ಲಿಂ ಯುವಕರು, ಸಿರೀಶ್ ಬಳ್ಳಾರಿಯವರ ಮನೆಯೊಳಗೆ ಹೊಕ್ಕು ಹಲ್ಲೆ ಮಾಡಿದ್ದಾರೆ. ಇದರಿಂದ, ಸಿರೀಶ್ ಬಳ್ಳಾರಿಯವರ ಕೈ ಹಾಗೂ ಮುಖಕ್ಕೆ ತೀವ್ರ ಗಾಯವಾಗಿದೆ.
ಸಿರೀಶ್ ಬಳ್ಳಾರಿಯವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



