IPL 2025: ಇಂದು RCB vs RR ಮುಖಾಮುಖಿ: ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ!

0
Spread the love

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಐಪಿಎಲ್ 2025ರ 42ನೇ ಪಂದ್ಯದಲ್ಲಿ ಆರ್​ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿವೆ. ತವರಿನಲ್ಲಿ ಸೋಲಿನ ಸರಮಾಲೆಯನ್ನು ಎದುರಿಸುತ್ತಿರುವ ಆರ್​ಸಿಬಿ ಪ್ಲೇ ಆಫ್ ಗೆ ಅರ್ಹತೆ ಪಡೆಯಲು ಹೋರಾಡಲಿದೆ. ರಾಜಸ್ಥಾನ್ ಕೂಡ ಪ್ಲೇ ಆಫ್ ರೇಸ್ ನಲ್ಲಿ ಜೀವಂತವಾಗಿರಲು ಹೋರಾಡಬೇಕಿದೆ.

Advertisement

ಹೀಗಾಗಿ ಸ್ಟೇಡಿಯಂ ಸುತ್ತಮುತ್ತ ಸಂಜೆ ವೇಳೆಗೆ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ವಾಹನ ಸವಾರರು ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣದ ಯೋಜನೆ ರೂಪಿಸಿವುದು ಒಳಿತು. ಸಂಚಾರ ನಿರ್ಬಂಧ, ಪಾರ್ಕಿಂಗ್ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರಿಂದ ಇತ್ತೀಚಿನ ಪ್ರಕಟಣೆ ಬಿಡುಗಡೆ ಆಗಿಲ್ಲ. ಆದಾಗ್ಯೂ, ಈ ಹಿಂದಿನ ಪಂದ್ಯಗಳ ವೇಳೆ ಜಾರಿಯಲ್ಲಿದ್ದ ಸಂಚಾರ ನಿರ್ಬಂಧ ಜಾರಿಯಲ್ಲಿರುವ ಸಾಧ್ಯತೆ ಇದೆ.

ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಆಗಬಹುದು?

ಕ್ವೀನ್ಸ್ ರಸ್ತೆ, ಎಂಜಿ ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಕಬ್ಬನ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರ್ಬಾ ರಸ್ತೆ, ಅಂಬೇಡ್ಕರ್ ವೀಧಿ, ಟ್ರಿನಿಟಿ ಜಂಕ್ಷನ್, ಲ್ಯಾವೆಲ್ಲೆ ರಸ್ತೆ, ವಿಠಲ್ ಮಲ್ಯ ರಸ್ತೆ ಮತ್ತು ನೃಪತುಂಗ ರಸ್ತೆಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುವ ನಿರೀಕ್ಷೆಯಿದೆ.

ಎಲ್ಲೆಲ್ಲಿ ವಾಹನ ಪಾರ್ಕಿಂಗ್?

ಈ ಹಿಂದಿನ ಪಂದ್ಯಗಳ ವೇಳೆ ಪಂದ್ಯ ವೀಕ್ಷಣೆ ಮಾಡಲು ಬರುವವರಿಗೆ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್ ಹಾಗೂ ಯು.ಬಿ.ಸಿಟಿ ನಿಲುಗಡೆ ಸ್ಥಳದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಒದಗಿಸಲಾಗಿತ್ತು. ಕೆ.ಎಸ್.ಸಿ.ಎ. ಸದಸ್ಯರ ವಾಹನಗಳನ್ನು ಸೆಂಟ್ ಜೋಸೆಫ್ ಬಾಲಕರ ಶಾಲೆ ಮೈದಾನದಲ್ಲಿ ನಿಲ್ಲಿಸಲು ಸೂಚಿಸಲಾಗಿತ್ತು.


Spread the love

LEAVE A REPLY

Please enter your comment!
Please enter your name here