ಒಂದೆಡೆ ಕಾಶ್ಮೀರದಲ್ಲಿ ನಡೆದ ಭೀಕರ ಉಗ್ರರ ದಾಳಿಯಿಂದ ಪಾಕಿಸ್ತಾನ್ ಮತ್ತು ಭಾರತದ ನಡುವಿನ ಸಂಬಂಧ ಮುರಿದು ಬಿದ್ದಿದೆ. ಈ ನಡುವೆಯೇ ಪಾಕಿಸ್ತಾನದ ಕ್ರಿಕೆಟಿಗ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ.
ಎಸ್, ಪಾಕಿಸ್ತಾನದ ವೇಗಿ ಮೊಹಮ್ಮದ್ ಆಮಿರ್ ಅವರು ಮುಂದಿನ ವರ್ಷದಿಂದ IPL ಆಡುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ನಾನು ಬ್ರಿಟಿಷ್ ಪೌರತ್ವವನ್ನು ಹೊಂದಿರುವುದರಿಂದ ಮುಂದಿನ ವರ್ಷ ಐಪಿಎಲ್ ಆಡಬಹುದು ಎಂದು ಅಮಿರ್ ಹೇಳಿದ್ದಾರೆ. ಅಲ್ಲದೆ ಪಿಎಸ್ಎಲ್ ಅಥವಾ ಐಪಿಎಲ್ ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ಅವಕಾಶ ಸಿಕ್ಕರೆ, ನಾನು ನಿಸ್ಸಂಶಯವಾಗಿ ಐಪಿಎಲ್ ಅನ್ನು ಆಯ್ಕೆ ಮಾಡುತ್ತೇನೆ ಎಂದು ಆಮಿರ್ ಹೇಳಿಕೊಂಡಿದ್ದಾರೆ.
ಮುಂದಿನ ವರ್ಷ ಪಿಎಸ್‌ಎಲ್ ಮತ್ತು ಐಪಿಎಲ್ ವೇಳಾಪಟ್ಟಿಯಲ್ಲಿ ಘರ್ಷಣೆ ಇರುತ್ತದೆ ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ ಈ ಬಾರಿ ಚಾಂಪಿಯನ್ಸ್ ಟ್ರೋಫಿ ಮತ್ತು ಇತರ ವಿಷಯಗಳು ಇದ್ದವು. ಆದರೆ ನಾನು ಪಿಎಸ್‌ಎಲ್‌ನಲ್ಲಿ ಮೊದಲು ಆಯ್ಕೆಯಾದರೆ ನನ್ನ ಹೆಸರನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಐಪಿಎಲ್, ಪಿಎಸ್ಎಲ್ಗಿಂತ ಬೇಗ ನಡೆದರೆ ನಾನು ಆ ಪಂದ್ಯಾವಳಿಯಲ್ಲಿ ಆಡುತ್ತೇನೆ. ಒಟ್ಟಾರೆಯಾಗಿ, ನನಗೆ ಎಲ್ಲಿ ಅವಕಾಶ ಸಿಕ್ಕಿತೋ ಅಲ್ಲಿ ಮೊದಲು ಆಡುತ್ತೇನೆ ಎಂದಿದ್ದಾರೆ.