ಮನೆಯಲ್ಲಿ ಇರುವೆಗಳಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಪ್ರಮುಖವಾಗಿ ಮನೆಯ ಅಡುಗೆ ಮನೆಯಲ್ಲಿ ಸಿಹಿ ಪದಾರ್ಥ ಹಾಗೂ ಇತರ ಸಾಮಗ್ರಿಗಳನ್ನು ಅದು ಸುತ್ತಿಕೊಳ್ಳುತ್ತದೆ. ಇದರಿಂದ ಅಡುಗೆ ಮಾಡುವುದೇ ಕಷ್ಟವಾಗಬಹುದು. ಇನ್ನು ಕೆಲವೊಮ್ಮೆ ಮಾಡಿಟ್ಟ ಬಿಸಿ ಅಡುಗೆಯ ಮುಚ್ಚಳ ಸ್ವಲ್ಪ ತೆರೆದಿದ್ದರೂ ಇರುವೆಗಳು ಅಲ್ಲಿಗೆ ದಾಳಿ ಮಾಡುತ್ತವೆ.
ಹೆಚ್ಚಿನವರ ಮನೆಯಲ್ಲಿ ಈ ಇರುವೆಗಳ ಕಾಟ ಇದ್ದೆ ಇರುತ್ತದೆ. ತಿಂಡಿ ತಿನಿಸುಗಳನ್ನು ಇಟ್ಟರೆ ಸಾಕು ಇರುವೆಗಳು ಮುತ್ತಿಕೊಳ್ಳುತ್ತವೆ. ಅದಲ್ಲದೇ, ಈ ಕಾಪಟಿನಲ್ಲಿಟ್ಟಿರುವ ಬಟ್ಟೆಗಳನ್ನು ಈ ಇರುವೆಗಳು ಬಿಡುವುದಿಲ್ಲ. ಈ ಇರುವೆಗಳನ್ನು ಓಡಿಸಲು ಮಾರುಕಟ್ಟೆಯಲ್ಲಿ ಸಿಗುವ ಔಷಧಗಳನ್ನು ಬಳಕೆ ಮಾಡುವವರೇ ಹೆಚ್ಚು. ಆದರೆ ನಿಮ್ಮ ಮನೆಯಲ್ಲಿರುವ ಈ ಪದಾರ್ಥಗಳಿಂದ ಇರುವೆಗಳಿಗೆ ಗುಡ್ ಬಾಯ್ ಹೇಳಬಹುದು.
ಬೇಕಿಂಗ್ ಸೋಡಾ: ನಿಮ್ಮ ಮನೆಯಲ್ಲಿ ಮಕ್ಕಳು ಅಥವಾ ಸಾಕುಪ್ರಾಣಿಗಳಿದ್ದರೆ, ಬೇಕಿಂಗ್ ಸೋಡಾವನ್ನು ಇರುವೆ ನಿವಾರಕವಾಗಿ ಬಳಸುವುದು ಅಪಾಯಕಾರಿ. ಏಕೆಂದರೆ ಇದರ ವಾಸನೆಯು ಮಕ್ಕಳ ವಾಂತಿಗೆ ಕಾರಣವಾಗಬಹುದು. ಒಂದು ವೇಳೆ ಮಕ್ಕಳು ಮತ್ತು ಪ್ರಾಣಿಗಳಿಲ್ಲದಿದ್ದರೆ ಇರುವೆಗಳು ಬರುವ ಕಡೆಗೆ ಅಡಿಗೆ ಸೋಡಾವನ್ನು ಉದುರಿಸಬಹುದು. ಮನೆಯಲ್ಲಿ ಕಸವನ್ನು ಎಸೆಯುವ ಡಸ್ಟ್ ಬಿನ್ ಸುತ್ತ ಅಡುಗೆ ಸೋಡಾ ಸಿಂಪಡಿಸಿದರೆ ಇರುವೆ ಬರುವುದಿಲ್ಲ.
ಕಾಳುಮೆಣಸು: ಇರುವೆಗಳಿಗೆ ಕಾಳುಮೆಣಸು ಅಂದರೆ ಇಷ್ಟವಾಗುವುದಿಲ್ಲ. ಆದ್ದರಿಂದ ಇರುವೆಗಳು ಸೇರುವ ಸ್ಥಳಗಳಲ್ಲಿ ನೀವು ಮೆಣಸು ಸಿಂಪಡಿಸಬಹುದು. ಆಗ ಇರುವೆಗಳು ಅಲ್ಲಿಂದ ಓಡಿಹೋಗುತ್ತವೆ. ಇದಕ್ಕಾಗಿ ನೀವು ಇರುವೆಗಳಿರುವ ಸ್ಥಳಗಳಲ್ಲಿ ಕರಿಮೆಣಸಿನ ಪುಡಿಯನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಬಹುದು. ಹೀಗೆ ಮಾಡಿದರೆ ಚಿಟಿಕೆ ಹೊಡೆಯುವಷ್ಟರಲ್ಲಿ ಇರುವೆಗಳು ಮಾಯವಾಗುತ್ತವೆ.
ದಾಲ್ಚಿನ್ನಿ: ನಮಗೆ ದಾಲ್ಚಿನ್ನಿ ವಾಸನೆ ಇಷ್ಟವಾಗುತ್ತದೆ. ಆದರೆ ಇರುವೆಗಳು ಇದನ್ನು ಇಷ್ಟಪಡುವುದಿಲ್ಲ. ಹಾಗಾಗಿ ಇರುವೆ ಗೂಡುಗಳ ಬಳಿ ದಾಲ್ಚಿನ್ನಿ ಪುಡಿಯನ್ನು ಹಾಕಿದರೆ ಅವು ಬೇರೆಡೆ ಹೋಗುತ್ತವೆ. ಇಲ್ಲದಿದ್ದರೆ ದಾಲ್ಚಿನ್ನಿ ಎಣ್ಣೆಯ ಬಾಟಲಿಯನ್ನು ಖರೀದಿಸಿ, ಅದರ ಕೆಲವು ಹನಿಗಳನ್ನು ನೀರಿಗೆ ಮಿಕ್ಸ್ ಮಾಡಿ ಇರುವೆಗಳು ಬರುವ ಜಾಗದಲ್ಲಿ ಚಿಮುಕಿಸಿ. ಇದರಿಂದ ಇರುವೆಗಳು ಇನ್ನು ಮುಂದೆ ಬರುವುದಿಲ್ಲ. ಹಾಗೆಯೇ ಕಿಟಕಿ, ಬಾಗಿಲುಗಳ ಮೂಲೆಗಳಲ್ಲಿ ದಾಲ್ಚಿನ್ನಿ ಇಟ್ಟರೆ, ಇರುವೆಯಷ್ಟೇ ಅಲ್ಲ ಮತ್ತಿತರ ಕೀಟಗಳು ಬರುವುದಿಲ್ಲ.
ನಿಂಬೆ ರಸ: ನಿಂಬೆ ರಸ ನಿಂಬೆ ರಸವು ಇರುವೆಗಳನ್ನು ಹಿಮ್ಮೆಟ್ಟಿಸುತ್ತದೆ. ಏಕೆಂದರೆ ಇರುವೆಗಳಿಗೆ ಹುಳಿ ಇಷ್ಟವಾಗುವುದಿಲ್ಲ. ನಿಂಬೆಯ ವಾಸನೆ ಇರುವೆಗಳನ್ನು ಹಿಮ್ಮೆಟ್ಟಿಸುತ್ತದೆ. ಮನೆಯನ್ನು ಸ್ವಚ್ಛಗೊಳಿಸುವಾಗ ನೀರಿಗೆ ಕೆಲವು ಹನಿ ನಿಂಬೆ ರಸವನ್ನು ಬೆರೆಸಿ ಸಿಂಪಡಿಸಿ ಇದರಿಂದ ಇರುವೆಗಳ ಕಾಟ ತಪ್ಪುತ್ತದೆ.
ವಿನೆಗರ್: ಇರುವೆಗಳನ್ನು ಓಡಿಸಲು ವಿನೆಗರ್ ಬೆಸ್ಟ್ ಮದ್ದು ಎಂದೇ ಹೇಳಬಹುದು. ನೀರಿಗೆ ಸ್ವಲ್ಪ ವಿನೆಗರ್ ಸೇರಿಸಿ, ಇರುವೆಗಳಿರುವ ಜಾಗದಲ್ಲಿ ಸಿಂಪಡಿಸಿ. ಆಗ ಇರುವೆಗಳು ತಕ್ಷಣವೇ ಹೊರಟು ಹೋಗುತ್ತವೆ. ಮತ್ತೆ ಅಲ್ಲಿಗೆ ಬರುವುದಿಲ್ಲ. ಅಲ್ಲದೇ ಕಿಟಕಿಗಳು ಮತ್ತು ಬಾಗಿಲುಗಳ ಮೇಲೆ ಸಿಂಪಡಿಸುವುದು ಉತ್ತಮ. ನೀವು ಸಿಂಪಡಿಸಿದ ನಂತರ ಇರುವೆಗಳು ಇನ್ನೂ ಇದ್ದರೆ, ನೀವು ಹೆಚ್ಚು ಸಿಂಪಡಿಸಬೇಕಾಗಬಹುದು.



