ಬೇಸಿಗೆಯಲ್ಲಿ ಸಾಮಾನ್ಯವಾಗಿ ಊಟ ಮಾಡಲು ಕಷ್ಟವಾಗುತ್ತದೆ. ಬರೀ ನೀರು, ಜ್ಯೂಸ್ ಹಣ್ಣು ತಿಂದು ಹೊಟ್ಟೆ ತುಂಬಿಸುವಂತಾಗಿದೆ. ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಕೊರತೆಯನ್ನು ನಿವಾರಿಸಲು ಸಹಕಾರಿಯಾಗಬಲ್ಲ ಈ ಹಣ್ಣನ್ನು ತಿನ್ನೋದು ಒಳ್ಳೆಯದು ಎಂದು ಪೌಷ್ಟಿಕತಜ್ಞರು ಹೇಳಿದ್ದಾರೆ.
ಬೇಸಿಗೆಯಲ್ಲಿ ಬಿಸಿಲಿನ ಧಗೆಯಿಂದ ದೇಹವು ತುಂಬಾ ಬೆವರಲಾರಂಭಿಸುತ್ತದೆ.ಇದು ದೇಹದಲ್ಲಿ ನೀರಿನ ಕೊರತೆಗೆ ಕಾರಣವಾಗಬಹುದು. ಇದರಿಂದಾಗಿ, ಆಯಾಸ, ದೌರ್ಬಲ್ಯ, ತಲೆತಿರುಗುವಿಕೆ, ಹೊಟ್ಟೆ ಉರಿ ಉಂಟಾಗಬಹುದು. ತೀವ್ರತರವಾದ ಪ್ರಕರಣಗಳಲ್ಲಿ ಶಾಖದ ಹೊಡೆತದಿಂದ ಬಳಲಬಹುದು. ಹೀಟ್‌ಸ್ಟ್ರೋಕ್ ತುಂಬಾ ಅಪಾಯಕಾರಿಯಾಗಿದ್ದು, ಪ್ರಾಣ ಹೋಗುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ದೇಹವನ್ನು ಹೈಡ್ರೀಕರಿಸಿಡುವುದು ಬಹಳ ಮುಖ್ಯ.
ಹೀಗಾಗಿ ಈ ಸಮಸ್ಯೆಗಳಿಂದ ನೀವು ತಪ್ಪಿಸಿಕೊಳ್ಳಲು ಬೇಸಿಗೆಯಲ್ಲಿ ಕೆಲವು ರೀತಿಯ ಹಣ್ಣುಗಳನ್ನು ತಿನ್ನಲೇಬೇಕು. ಈ ಸೀಸನ್ನಲ್ಲಿ ಸಿಗುವ ಹಣ್ಣುಗಳು ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತವೆ. ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ನಿಯಂತ್ರಿಸಿ ಆರೋಗ್ಯವನ್ನು ಕಾಪಾಡುತ್ತವೆ. ಹಾಗಾದ್ರೆ ಈ ಸೀಸನ್ನಲ್ಲಿ ಪ್ರತಿಯೊಬ್ಬರೂ ತಿನ್ನಲೇಬೇಕಾದ ಹಣ್ಣುಗಳು ಯಾವುವು ಎಂದು ನೋಡೋಣ ಬನ್ನಿ.
ಕರಬೂಜ: ಬೇಸಿಗೆಯ ಹಣ್ಣುಗಳಲ್ಲಿ ಕರಬೂಜ ಹಣ್ಣು ಕೂಡ ಒಂದು. ಈ ಹಣ್ಣಿನಲ್ಲಿ ಹೆಚ್ಚಿನ ನೀರಿನ ಅಂಶವಿದೆ. ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಾಗುವುದನ್ನು ತಡೆಯುತ್ತದೆ. ವಿಟಮಿನ್ ಎ ಯಲ್ಲಿ ಸಮೃದ್ಧವಾಗಿರುವ ಕಲ್ಲಂಗಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದ ಜೀವಕೋಶಗಳಲ್ಲಿನ ಆಂತರಿಕ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಜೀವಕೋಶದ ದುರಸ್ತಿಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
ಸೂರ್ಯನಿಂದ ಚರ್ಮವನ್ನು ರಕ್ಷಿಸುತ್ತದೆ. ಇದರಲ್ಲಿ ಔಷಧೀಯ ಗುಣಗಳಿವೆ. ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ. ಕರಬೂಜದಲ್ಲಿರುವ ಬೀಟಾ-ಕ್ಯಾರೋಟಿನ್ ಕಣ್ಣಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಆದರೆ ಆಂಟಿ-ಆಕ್ಸಿಡೆಂಟ್ಗಳು ದೇಹದಲ್ಲಿನ ಫ್ರೀ ರಾಡಿಕಲ್ಗಳನ್ನು ಹೊರಹಾಕುತ್ತದೆ. ಕಲ್ಲಂಗಡಿ ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ. ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಕಲ್ಲಂಗಡಿ: ಬೇಸಿಗೆಯಲ್ಲಿ ಹೆಚ್ಚು ಸಿಗುವ ಹಣ್ಣುಗಳಲ್ಲಿ ಕಲ್ಲಂಗಡಿ ಕೂಡ ಒಂದು. ಕಲ್ಲಂಗಡಿ ಶೇ.90ರಷ್ಟು ನೀರಿನಂಶ ಹೊಂದಿದೆ. ಇದು ಬೇಸಿಗೆಯ ಶಾಖದಿಂದ ದೇಹವನ್ನು ನಿವಾರಿಸುತ್ತದೆ. ಹಾಗಾಗಿ ಈ ಸೀಸನ್ನಲ್ಲಿ ಕಲ್ಲಂಗಡಿಗೆ ಬೇಡಿಕೆ ಹೆಚ್ಚು. ಇವುಗಳಲ್ಲಿ ವಿಟಮಿನ್ ಎ, ವಿಟಮಿನ್ ಬಿ6, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ನಂತಹ ಖನಿಜಗಳಿವೆ. ಇವು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೇಸಿಗೆಯ ಕಾಯಿಲೆಗಳಾದ ಕೆಮ್ಮು, ನೆಗಡಿ ಮತ್ತು ಅಲರ್ಜಿಯನ್ನು ದೂರವಿಡುತ್ತದೆ. ಕಲ್ಲಂಗಡಿಯಲ್ಲಿರುವ ನೀರಿನಂಶವು ನಿರ್ಜಲೀಕರಣವನ್ನು ತಡೆಯುತ್ತದೆ. ಇದರ ಪೋಷಕಾಂಶಗಳು ಸ್ನಾಯುಗಳನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.
ಮಾವಿನ ಹಣ್ಣು: ಇದು ಬೇಸಿಗೆಯಲ್ಲಿ ಮಾತ್ರ ಸಿಗುವ ಹಣ್ಣಾಗಿದೆ. ಇವುಗಳಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ. ಅವು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತವೆ. ಬೇಸಿಗೆಯ ಬಿಸಿಗೆ ದೇಹದಲ್ಲಿ ಶಕ್ತಿ ನಾಶವಾಗುತ್ತದೆ. ಹೀಗಿರುವಾಗ ಮಾವಿನ ಹಣ್ಣನ್ನು ತಿಂದರೆ ದೇಹಕ್ಕೆ ತ್ವರಿತ ಶಕ್ತಿ ಸಿಗುತ್ತದೆ. ಇವುಗಳಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಜೀವಸತ್ವಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಅಲ್ಲದೇ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಒದಗಿಸುತ್ತವೆ.
ಪಪ್ಪಾಯಿ: ಬೇಸಿಗೆಯಲ್ಲಿ ಸವಿಯಬೇಕಾದ ಮತ್ತೊಂದು ಮುಖ್ಯವಾದ ಹಣ್ಣು ಪಪ್ಪಾಯಿ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಫೋಲೇಟ್, ಫೈಟೊಕೆಮಿಕಲ್ಸ್ ಮುಂತಾದ ಪೋಷಕಾಂಶಗಳಿವೆ. ಇದು ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತಾರೆ. ಅಜೀರ್ಣ ಮತ್ತು ಗ್ಯಾಸ್ಟ್ರಿಕ್ ಅನ್ನು ಸಹ ತಡೆಯುತ್ತದೆ. ಪಪ್ಪಾಯಿಯಲ್ಲಿರುವ ಬೀಟಾ ಕ್ಯಾರೋಟಿನ್ ಬೇಸಿಗೆಯಲ್ಲಿ ಆಗಾಗ್ಗೆ ಉಂಟಾಗುವ ಕಣ್ಣಿನ ಆಯಾಸವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ. ಪಪ್ಪಾಯಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳು ಹೃದಯವನ್ನು ಆರೋಗ್ಯವಾಗಿರಿಸುತ್ತದೆ.
ಪೇರಲೆ: ಹಣ್ಣಿನಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಣ್ಣು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಆದ್ದರಿಂದ ಮಧುಮೇಹಿಗಳಿಗೆ ಪೇರಲವನ್ನು ಸೂಪರ್ ಹಣ್ಣು ಎಂದು ಹೇಳಲಾಗುತ್ತದೆ. ಬೇಸಿಗೆಯಲ್ಲಿ ಜೀರ್ಣಕ್ರಿಯೆ ಸಮಸ್ಯೆ ಸಾಮಾನ್ಯ. ಆದರೆ ಪೇರಲ ಹಣ್ಣುಗಳನ್ನು ತಿಂದರೆ ಅದರಲ್ಲಿರುವ ನಾರಿನಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ತೃಪ್ತಿಯ ಭಾವವನ್ನು ಉತ್ತೇಜಿಸುತ್ತದೆ. ಬೇಸಿಗೆಯ ತೀವ್ರ ಬಿಸಿಲು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಪೇರಲವನ್ನು ತಿನ್ನುವುದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ.