ಕಲಬುರಗಿಯಲ್ಲಿ ATMನಿಂದ 18 ಲಕ್ಷ ರೂ ಕದ್ದಿದ್ದ ಅಂತರರಾಜ್ಯ ಕಳ್ಳರ ಮೇಲೆ ಪೊಲೀಸ್ ಫೈರಿಂಗ್!

0
Spread the love

ಕಲಬುರಗಿ: ಎರಡು ವಾರಗಳ ಹಿಂದೆ ಎಟಿಎಂ ದರೋಡೆ ಮಾಡಿದ್ದ ಆರೋಪಿಗಳ ಮೇಲೆ ಖಾಕಿ ಫೈರಿಂಗ್ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಕಲಬುರಗಿ ಜಿಲ್ಲೆಯ ರಾಮನಗರ ಬಡಾವಣೆಯ ಎಸ್‌ಬಿಐ ಎಟಿಎಂನಿಂದ 18 ಲಕ್ಷ ರೂ. ಹಣವನ್ನು ದೋಚಿದ್ದರು.

Advertisement

ದರೋಡೆಕೋರರನ್ನು ಪೊಲೀಸರು ಬಂಧಿಸಲು ಹೋದಾಗ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಹರಿಯಾಣ ಮೂಲದ ಆರೋಪಿಗಳಾದ ತಸ್ಲಿಂ ಹಾಗೂ ಶರೀಫ್ ಕಾಲಿಗೆ ಗುಂಡು ಹಾರಿಸಿದ್ದಾರೆ.

ಘಟನೆಯಲ್ಲಿ ಪಿಎಸ್‌ಐ ಬಸವರಾಜ್ ಹಾಗೂ ಇಬ್ಬರು ಪೊಲೀಸರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಂಧಿತ ಆರೋಪಿಗಳಾದ ತಸ್ಲಿಂ ವಿರುದ್ಧ 8 ಪ್ರಕರಣಗಳು ಹಾಗೂ ಶರೀಫ್ ವಿರುದ್ಧ 3 ಪ್ರಕರಣ ದಾಖಲಾಗಿವೆ. ಈ ಗ್ಯಾಂಗ್ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಎಟಿಎಂಗಳನ್ನೇ ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದರು.


Spread the love

LEAVE A REPLY

Please enter your comment!
Please enter your name here