HomeGadag Newsಸ್ವಾಭಿಮಾನಿ ಕರವೇ ಬಾಗಲಕೋಟ ಪದಾಧಿಕಾರಿಗಳ ಆಯ್ಕೆ

ಸ್ವಾಭಿಮಾನಿ ಕರವೇ ಬಾಗಲಕೋಟ ಪದಾಧಿಕಾರಿಗಳ ಆಯ್ಕೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಬಾಗಲಕೋಟ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ವೇದಿಕೆಯ ಅಧ್ಯಕ್ಷ ಎಂ.ಎ. ಕುರ್ತಕೋಟಿ ಅವರ ನೇತೃತ್ವದಲ್ಲಿ ಬಾಗಲಕೋಟೆಯ ಹಳೆಯ ಪ್ರವಾಸಿ ಮಂದಿರದಲ್ಲಿ ಆಯ್ಕೆ ಮಾಡಲಾಯಿತು.

ಬಾಗಲಕೋಟ ಜಿಲ್ಲಾಧ್ಯಕ್ಷರಾಗಿ ಅಲ್ತಾಫಹುಸೇನ ಇಮಾಮಹುಸೇನ ಬೇನುರ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಬಾಗಲಕೋಟ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಡಾ. ಕೆ.ಎಚ್. ಮುಲ್ಲಾ ಅವರನ್ನು ನೇಮಕ ಮಾಡಲಾಯಿತು.

ನೂತನ ಜಿಲ್ಲಾಧ್ಯಕ್ಷ ಇಮಾಮಹುಸೇನ ಬೇನುರ ಮಾತನಾಡಿ, ಉತ್ತರ ಕರ್ನಾಟಕ ಅಧ್ಯಕ್ಷರಾದ ಎಂ.ಎ. ಕುರ್ತಕೋಟಿ ಅವರು ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿ, ಬಾಗಲಕೋಟೆ ಜಿಲ್ಲೆಯಲ್ಲಿ ಸ್ವಾಭಿಮಾನಿ ಕರವೇ ಸಂಘಟನೆಯನ್ನು ಬಲಿಷ್ಠಗೊಳಿಸಿ ಕನ್ನಡ ನಾಡು, ನುಡಿ, ಭಾಷೆ, ನೆಲ, ಜಲಕ್ಕಾಗಿ ಹಾಗೂ ಬಡವರ ಮತ್ತು ಶೋಷಿತ ಸಮುದಾಯದವರ ಹಾಗೂ ಅನ್ಯಾಯ ವಿರುದ್ಧ ಯಾವುದೇ ಹೋರಾಟದಲ್ಲಿ ಸಂಪೂರ್ಣವಾಗಿ ಭಾಗಿಯಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸೋಹಿಲ್ ಬಸೀರಸಾಬ ಢಾಲಾಯತ, ಮಂಜುನಾಥ ಹಳವಾರ, ಶಕೀಲ್ ಇಂದಿಕರ, ಅಲ್ತಾಫ ಗುಡೇಕರ, ಜಾವೀದ ಕುಂಟುಜಿ, ಈರಣ್ಣ ಪೂಜಾರಿ, ಹಜರುದ್ದೀನ ಢಾಲಾಯತ, ಸಮೀರ ಮುಲ್ಲಾ, ಅಲ್ತಾಫ ಶಹಾಪೂರ, ವಿನೋದ ಡೆಂಗಿ, ಸಲೀಮ ಢಾಲಾಯತ, ಅಸ್ಲಂ ಢಾಲಾಯತ, ತನ್ವೀರ ಮುಲ್ಲಾ, ಮೆಹಬೂಬ ಕಮತಗಿ, ರಾಜಾಸಾಬ ಬೆಂಗಳೂರ ಮುಂತಾದವರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!