ಇಂಡಿಯನ್ ಪ್ರೀಮಿಯರ್ ಲೀಗ್ನ 46ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಜಯ ಸಾಧಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18.3 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಗೆಲುವು ದಾಖಲಿಸಿದೆ.
ಸೋಲಿನ ನಂತರ ದೆಹಲಿ ನಾಯಕ ಅಕ್ಷರ್ ಪಟೇಲ್ ಮಾತನಾಡಿ, ಬ್ಯಾಟಿಂಗ್ ನಲ್ಲಿ ನಾವು ಆರ್ ಸಿಬಿಗಿಂತ ಹಿಂದುಳಿದಿದ್ದೆವು. ಆದಾಗ್ಯೂ, ಇದರ ಹೊರತಾಗಿ ಅವರು ಸೋಲಿಗೆ ಹಲವು ಕಾರಣಗಳನ್ನು ನೀಡಿದರು. ‘‘ನಾವು ಬ್ಯಾಟಿಂಗ್‌ನಲ್ಲಿ 10 ರಿಂದ 15 ರನ್‌ಗಳಿಂದ ಸೋತಿದ್ದೇವೆ.
ಕಡಿಮೆ ರನ್‌ಗಳ ಸಂಖ್ಯೆಗೆ ಒಂದು ಪ್ರಮುಖ ಕಾರಣವೆಂದರೆ ಬೇಗನೆ ಇಬ್ಬನಿ ಬಿದ್ದಿದ್ದು. ಈ ಪಂದ್ಯದಲ್ಲಿ ನಮ್ಮ ಫೀಲ್ಡಿಂಗ್ ತುಂಬಾ ಕಳಪೆಯಾಗಿತ್ತು. ಪಂದ್ಯದ ದಿಕ್ಕನ್ನೇ ತಿರುಗಿಸುವ ಕೆಲವು ಅವಕಾಶಗಳನ್ನು ನಾವು ಕಳೆದುಕೊಂಡೆವು’’ ಎಂದು ಹೇಳಿದ್ದಾರೆ.
ಈ ಋತುವಿನಲ್ಲಿ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ, ಆದರೆ ಆರ್‌ಸಿಬಿ ವಿರುದ್ಧ ಅವರ ಬ್ಯಾಟಿಂಗ್ ತುಂಬಾ ನಿಧಾನವಾಗಿತ್ತು. ಕೆ. ಎಲ್. ರಾಹುಲ್ ಮತ್ತು ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಅಕ್ಷರ್ ಮಾತನಾಡಿ, ‘‘ನಾವು ಇನ್ನಿಂಗ್ಸ್‌ನಲ್ಲಿ ದಾಳಿ ಮಾಡಲು ಪ್ರಯತ್ನಿಸಿದಾಗಲೆಲ್ಲಾ ನಮ್ಮ ವಿಕೆಟ್‌ಗಳು ಬೀಳುತ್ತಿದ್ದವು. ನಾನು ಕೆಳ ಕ್ರಮಾಂದಲ್ಲಿ ಆಡಿದರೂ ಅಥವಾ ಮೇಲಿನ ಕ್ರಮಾಂಕದಲ್ಲಿ ಆಡಲು ಬಂದರೂ, ಕೆಎಲ್ ರಾಹುಲ್ ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರು ಮತ್ತು ಅವರಿಗೆ ಒಂದು ಅವಕಾಶ ನೀಡಬೇಕಿತ್ತು’’ ಎಂದು ಹೇಳಿದ್ದಾರೆ.