ಅನುಮಾನಾಸ್ಪದ ರೀತಿಯಲ್ಲಿ ತಾಲೂಕು ಕಚೇರಿ ಸಿಬ್ಬಂದಿ ಶವ ಪತ್ತೆ!

0
Spread the love

ಹಾಸನ:– ಅನುಮಾನಾಸ್ಪದ ರೀತಿಯಲ್ಲಿ ತಾಲೂಕು ಕಚೇರಿ ಸಿಬ್ಬಂದಿ ಶವ ಪತ್ತೆಯಾಗಿರುವ ಘಟನೆ ಹಾಸನ ನಗರದ ಚನ್ನಪಟ್ಟಣ ಬಡಾವಣೆಯಲ್ಲಿ ನಡೆದಿದೆ. 43 ವರ್ಷದ ಸತೀಶ್ ಮೃತ ವ್ಯಕ್ತಿ. ಇವರು, ಹದಿನೈದು ವರ್ಷಗಳ ಹಿಂದೆ ವಿದ್ಯಾ ಎಂಬುವವರ ಜೊತೆ ಮದುವೆಯಾಗಿದ್ದರು. ಪತಿ-ಪತ್ನಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿದ್ದು, ಹಲವು ಬಾರಿ ಕುಟುಂಬಸ್ಥರು ರಾಜೀ ಸಂಧಾನ ಮಾಡಿದ್ದರು. ಆದರೂ ಗಂಡ-ಹೆಂಡತಿ ನಡುವೆ ಜಗಳ, ವೈಮನಸ್ಸು ಸರಿಯಾಗಿರಲಿಲ್ಲ. ನಿನ್ನೆ ಬೆಳಗ್ಗೆ ಮನೆಯಲ್ಲೇ ಸತೀಶ್ ಮೃತಪಟ್ಟಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Advertisement

ಇನ್ನೂ ಪತ್ನಿ ಮತ್ತು ಅವರ ಕಡೆಯವರೇ ಸೇರಿ ನನ್ನ ಮಗನನ್ನ ಕೊಲೆ ಮಾಡಿದ್ದಾರೆ ಎಂದು ಮೃತ ಸತೀಶ್‌ ಕುಟುಂಬಸ್ಥರು ಆರೋಪಿಸಿದ್ದಾರೆ. ಸತೀಶ್‌ ತಲೆಗೆ ಪೆಟ್ಟಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದು ಇದಕ್ಕೆ ಪುಷ್ಟಿ ನೀಡಿದಂತಿದೆ. ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ‌.


Spread the love

LEAVE A REPLY

Please enter your comment!
Please enter your name here