ಚಾಮರಾಜನಗರ:- ಕಾಡಾನೆ ದಾಳಿಗೆ 60 ವರ್ಷದ ರೈತ ಬಲಿಯಾಗಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಕೊರಮನಕತ್ತರಿ ಗ್ರಾಮದಲ್ಲಿ ಜರುಗಿದೆ. ನಂಜಪ್ಪ (60) ಮೃತ ರೈತ.
Advertisement
ಜಿಲ್ಲೆಯ ಹನೂರು ತಾಲೂಕಿನ ಪಿಜಿಪಾಳ್ಯ ಬೀಟ್ ಸಮೀಪದ ತೋಟದ ಮನೆಯಲ್ಲಿ ರೈತ ವಾಸವಿದ್ದ. ಅದರಂತೆ ಇಲ್ಲಿ ಒಕ್ಕಣೆ ಮಾಡಲಾಗಿದ್ದ ಅರಿಶಿಣವನ್ನು ರಾತ್ರಿ ವೇಳೆ ಕಾವಲು ಕಾಯುತ್ತಿದ್ದ. ಇದೇ ಸಂದರ್ಭದಲ್ಲಿ
ಆನೆ ದಾಳಿ ಮಾಡಿದ್ದು, ತೀವ್ರ ಗಾಯಗೊಂಡ ರೈತ ನಂಜಪ್ಪ ಸ್ಥಳದಲ್ಲೇ
ಮೃತಪಟ್ಟಿದ್ದಾರೆ.
ಮಾಹಿತಿ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.