ಕಲಬುರಗಿ: ಎಂಆರ್ ಎಂ ಸಿ ಮೆಡಿಕಲ್ ಕಾಲೇಜಿನ 700 ಜನ ಎಂಬಿಬಿಎಸ್ ವಿದ್ಯಾರ್ಥಿಗಳ ಶಿಷ್ಯವೇತನ ಹಗರಣ ಮಾಡಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಕಲಬುರಗಿ ಕಾಂಗ್ರೆಸ್ ಮುಖಂಡ ಭೀಮಾಶಂಕರ್ ಬಿಲಗುಂದಿ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ಮಾಡಿದ್ದಾರೆ.
Advertisement
ನಾಲ್ವರು ಅಧಿಕಾರಿಗಳ ತಂಡ ಏಕಕಾಲಕ್ಕೆ ಕಲಬುರಗಿಯ ರಿಂಗ್ ರೋಡ್ ಬಳಿಯಿರುವ ಭೀಮಾಶಂಕರ್ ಬಿಲಗುಂದಿ ಅವರ ಮನೆ ಮೇಲೆ ದಾಳಿ ಮಾಡಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ. 2018 ರಿಂದ 2024 ರ ವರೆಗೆ ಹೈದರಾಬಾದ್ ಶಿಕ್ಷಣ ಸಂಸ್ಥೆಯ ಎರಡು ಅವಧಿಗೆ ಅಧ್ಯಕ್ಷರಾಗಿದ್ದ ಭೀಮಾಶಂಕರ್ ಬಿಲಗುಂದಿ ವಿರುದ್ಧ ಎಂಆರ್ ಎಂ ಸಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಶಿಷ್ಯವೇತನ ಹಗರಣ ಆರೋಪ ಕೇಳಿಬಂದಿತ್ತು.
700 ಜನ ಎಂಬಿಬಿಎಸ್ ವಿದ್ಯಾರ್ಥಿಗಳ ಸುಮಾರು 80 ಕೋಟಿ ರೂ. ಅಧಿಕ ಹಣ ನೀಡದೆ ವಂಚನೆ ಮಾಡಿರುವ ಆರೋಪ ಇವರ ಮೇಲೆ ಕೇಳಿಬಂದಿತ್ತು.