ಬೆಂಗಳೂರು: ದೇಶದ ರಕ್ಷಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ಒಳ್ಳೆಯ ಹೆಜ್ಜೆ ತೆಗೆದುಕೊಳ್ಳಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ನಾವು ಅವರಿಗೆ ಪಾಕಿಸ್ತಾನದ ವಿರುದ್ಧ ಕಾರ್ಯ ನಿರ್ವಹಿಸಲು ಸಂಪೂರ್ಣ ಅಧಿಕಾರ ಕೊಟ್ಟಿದ್ದೇವೆ.
Advertisement
ಯಾವುದೇ ರೀತಿಯಲ್ಲಿ ಭಾರತ ದೇಶದ ಸೈನಿಕರಿಗಾಗಲಿ ಜನರಿಗಾಗಿ ತೊಂದರೆ ಆಗಬಾರದು. ಪಾಕಿಸ್ತಾನವನ್ನ ಹತೋಟಿಯಲ್ಲಿ ಇಡಲು ಯಾವುದೇ ಕ್ರಮಕ್ಕೂ ನಾವು ಪ್ರಧಾನಿಗಳಿಗೆ ಬೆಂಬಲ ಕೊಟ್ಟಿದ್ದೇವೆ ಎಂದರು.
ಇನ್ನೂ ಜನರ ಅನಿಸಿಕೆ ಹಾಗೂ ದೇಶದಲ್ಲಿ ಇರುವ ಭಾವನೆ, ಜೊತೆಗೆ ಎಲ್ಲಾ ಪಕ್ಷಗಳು ಅವರಿಗೆ ಅಧಿಕಾರ ನೀಡಿದ್ದೇವೆ. ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆ ಅಧಿಕಾರ ಮಾಡಲು ಕೊಟ್ಟಿದ್ದೇವೆ. ಅದನ್ನು ಅವರು ಉಪಯೋಗ ಮಾಡಿಕೊಳ್ಳಲಿ, ತಮ್ಮ ಕೆಲಸವನ್ನು ಅವರು ಮಾಡಲಿ. ದೇಶದ ರಕ್ಷಣೆ ಮಾಡುವುದಕ್ಕೆ ಆದಷ್ಟು ಬೇಗನೆ ಒಳ್ಳೆಯ ಹೆಜ್ಜೆನೆ ಇಡಬೇಕು ಎಂದರು.