ವಿಜಯಸಾಕ್ಷಿ ಸುದ್ದಿ, ಡಂಬಳ: ಓಕಳಿ ಬಂಡೆಯಲ್ಲಿ ಆಂಜನೇಯ ಭಾವಚಿತ್ರ ಮತ್ತು ಬಸವ ಜಯಂತಿ ನಿಮಿತ್ತ ಜೋಡೆತ್ತುಗಳ ಮೆರವಣಿಗೆ ಬುಧವಾರ ಸಂಭ್ರಮದಿಂದ ನೆರವೇರಿತು. ಡಂಬಳ ಗ್ರಾಮದ ಯುವಕರ ಆಶ್ರಯದಲ್ಲಿ ಗ್ರಾಮದ ರೈತರು ತಮ್ಮ ಜೋಡೆತ್ತುಗಳ ಮೆರವಣಿಗೆ ಮಾಡಿದರು.
ರೈತರು ಎತ್ತು, ಹೋರಿ, ಆಕಳುಗಳನ್ನು ಸಿಂಗರಿಸಿ, ಕೊರಳಿಗೆ ಹುರಿಗೆಜ್ಜೆ, ಕಿರುಗಂಟೆಗಳ ಸರ ಹಾಕಿ ಸಿಂಗರಿಸಿದ್ದರು. ಗಳೆ, ನೊಗ, ಗಾಡಿ, ಹಗ್ಗ, ಪಲಗ, ದಿಂಡು ಮಂತಾದ ಕೃಷಿ ಸಲಕರಣೆಗಳನ್ನು ಸಜ್ಜುಗೊಳಿಸಿ ಪೂಜೆ ಮಾಡಿದರು. ಹಾಲೇಶ್ವರ ಗದ್ದುಗೆಯ ಆವರಣದಲ್ಲಿ ಗೋದಿ ಹುಗ್ಗಿ ಅನ್ನ ಸಂತರ್ಪಣೆ ಜರುಗಿತು.
ಈ ಸಂದರ್ಭದಲ್ಲಿ ಗೋಣಿಬಸಪ್ಪ ಕೊರ್ಲಹಳ್ಳಿ, ರಮೇಶ ಹೊಂಬಳ, ಹಾಲಪ್ಪ ಡೊಳ್ಳಿನ, ಸಣ್ಣ ಹನುಮಪ್ಪ ಬಂಡಿ, ರಾಮಪ್ಪ ಪೂಜಾರಿ, ರಾಮಪ್ಪ ಹೊಂಬಾಳ, ಹನುಮಪ್ಪ ರಾಘಣ್ಣನವರ್, ಸೋಮಪ್ಪ ಗಿರಾಗತಿ, ಬೀರಪ್ಪ ಪೂಜಾರ, ಕೆಂಚಪ್ಪ ಡೊಳ್ಳಿನ, ಸಿದ್ದಪ್ಪ ಹೊಂಬಾಳ, ಕುಬೇರಪ್ಪ ಕವಲಿ, ಬಸವರಾಜ್ ಕವಲಿ, ಸಿದ್ದಪ್ಪ ಮಂಗೋಜಿ, ಭರ್ಮಪ್ಪ ಕೋತಂಬರಿ, ಭೀಮಪ್ಪ ಕಿತ್ನೂರ, ಹನುಮಪ್ಪ ಪಲ್ಲೇದ, ಗುರಪ್ಪ ಬಂಡಿ, ಗುರಪ್ಪ ಮಂಗೋಜಿ, ರೇವಣಸಿದ್ದಪ್ಪ ಕರಿಗಾರ, ಸಿದ್ದಪ್ಪ ಹೊಂಬಾಳ, ರವಿ ಆಲೂರ, ಸಿದ್ದಪ್ಪ ಪಲ್ಲೇದ, ಕರಿಯಪ್ಪ ಪಲ್ಲೀರ್, ಬಸಪ್ಪ ಕರಿಗಾರ, ಹೊಂಬಾಳ ಎಲ್ಲಪ್ಪ ಕರಿಗಾರ, ರಾಮಪ್ಪ ಚವಡಕಿ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಇದ್ದರು.


