CSK Vs PBKS: ತವರಲ್ಲಿ ಹ್ಯಾಟ್ರಿಕ್ ಸೋಲು: ಪಂಜಾಬ್ ಆರ್ಭಟಕ್ಕೆ ನಲುಗಿದ ಚೆನ್ನೈ- ಟೂರ್ನಿಯಿಂದಲೇ ಸಿಎಸ್‌ಕೆ ಔಟ್!

0
Spread the love

ಚೆನ್ನೈ:– 2025ರ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹೀನಾಯ ಪ್ರದರ್ಶನ ತೋರಿದ್ದು, ತವರಲ್ಲೇ ಸೋತು, ಸೋತು, ಇದೀಗ ಟೂರ್ನಿಯಿಂದಲೇ ಔಟ್ ಆಗಿದೆ.

Advertisement

ಬುಧವಾರ ಚೆನ್ನೈನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ 4 ವಿಕೆಟ್‌ಗಳ ಜಯ ಸಾಧಿಸಿದೆ. ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಚೆನ್ನೈ 190 ರನ್‌ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್‌ 19.4 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 194 ರನ್‌ ಹೊಡೆಯುವ ಮೂಲಕ ಜಯ ಸಾಧಿಸಿತು. ಈ ಮೂಲಕ ಈ ಐಪಿಎಲ್‌ನಲ್ಲಿ ನಿರ್ಗಮಿಸಿದ ಮೊದಲ ತಂಡ ಎಂಬ ಕುಖ್ಯಾತಿಗೆ ಚೆನ್ನೈ ಪಾತ್ರವಾಯಿತು.

ಪಂಜಾಬ್ ಬೌರ್ಸ್ ಯಜುವೇಂದ್ರ ಚಹಲ್ 4 ವಿಕೆಟ್ ಕಿತ್ತು ಆಕರ್ಷಕ ಬೌಲಿಂಗ್ ಪ್ರದರ್ಶಿಸಿದರು. ಅರ್ಶದೀಪ್ ಸಿಂಗ್ ಹಾಗೂ ಮಾರ್ಕೋ ಜಾನ್ಸ್‌ನ್‌ ತಲಾ 2 ವಿಕೆಟ್ ಕಬಳಿಸಿದರು. ಅಜ್ಮತುಲ್ಲಾ ಒಮರ್ಜಾಯ್ ಹಾಗೂ ಹರ್‌ಪ್ರೀತ್ ಬ್ರಾರ್ ತಲಾ 1 ವಿಕೆಟ್‌ಗಳಿದರು.


Spread the love

LEAVE A REPLY

Please enter your comment!
Please enter your name here