HomeKarnataka Newsಇಡಿ ದೇಶದ ಜನರಿಗೆ ನ್ಯಾಯಕೊಡುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು: ಸ್ಪೀಕರ್ ಯುಟಿ ಖಾದರ್

ಇಡಿ ದೇಶದ ಜನರಿಗೆ ನ್ಯಾಯಕೊಡುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು: ಸ್ಪೀಕರ್ ಯುಟಿ ಖಾದರ್

For Dai;y Updates Join Our whatsapp Group

Spread the love

ಬೀದರ್‌: ಇಡಿ ದೇಶದ ಜನರಿಗೆ ನ್ಯಾಯಕೊಡುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ. ಪಹಲ್ಗಾಮ್ ದಾಳಿ ಖಂಡಿಸಿ ಬೀದರ್‌ ನಲ್ಲಿ ಮಾತನಾಡಿದ ಅವರು, ಕೃತ್ಯವನ್ನು ಈಗಾಗಲೇ ಎಲ್ಲರೂ ಖಂಡಿಸಿದ್ದಾರೆ.

ದಾಳಿಕೋರರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವದರ ಜೊತೆಗೆ ಅದರ ಹಿಂದೆ ಯಾರಿದ್ದಾರೋ ಅವರನ್ನು ಮಟ್ಟ ಹಾಕುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು.

ದೇಶದ ಜನರು ಮೋದಿಯವರಿಂದ ಇದನ್ನೇ ಅಪೇಕ್ಷೆ ಪಡುತ್ತಾರೆ. ದಾಳಿಗೊಳಗಾದ ಜನರಿಗೆ ಮಾತ್ರವಲ್ಲ, ಇಡಿ ದೇಶದ ಜನರಿಗೆ ನ್ಯಾಯಕೊಡುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು ಎಂದರು.

ದೇಶದ ಸೌಹಾರ್ದತೆಯನ್ನು ಕದಡುವುದು ಭಯೋತ್ಪಾದಕ ಕೃತ್ಯದ ಉದ್ದೇಶವಾಗಿದ್ದು, ಜಾತ್ಯಾತೀತತೆಯನ್ನ ಹಾಳು ಮಾಡಿ, ದೇಶವನ್ನು ದುರ್ಬಲಗೊಳಿಸುವುದು ಅವರ ಗುರಿಯಾಗಿದೆ.

ಈ ಕೃತ್ಯದ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಅದನ್ನೆಲ್ಲ ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು. ಯುದ್ಧ ಮಾಡಬೇಕಾ ಅಥವಾ ಬೇಡವಾ? ಎನ್ನುವುದು ಮೋದಿ ಹಾಗೂ ಸರ್ವಪಕ್ಷಗಳಿಗೆ ಬಿಟ್ಟಿದ್ದು ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!