ಜಗದ್ವಂದ್ಯ ಆದಿ ಶಂಕರಾಚಾರ್ಯರು

0
Spread the love

ಇಂದು, ವೈಶಾಖ ಶುದ್ಧ ಪಂಚಮಿಯ ದಿನ ಭಾರತದಾದ್ಯಂತ ತತ್ವಜ್ಞಾನಿಗಳ ದಿನಾಚರಣೆಯನ್ನಾರಿಸುತ್ತಿದ್ದಾರೆ. ಅದರ ಪ್ರಯುಕ್ತ ಇಂದು ನಾವು ತತ್ವಜ್ಞಾನಿಗಳಲ್ಲಿಯೇ ಮೇರು ಶಿಖರದಲ್ಲಿರುವ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಕುರಿತು, ಅವರ ಸಾಧನೆಗಳನ್ನು ಮೇಲಕು ಹಾಕೋಣ. ಇದಕ್ಕೆ ಇನ್ನೊಂದು ಕಾರಣ ಇಂದು ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜಯಂತಿಯೂ ಕೂಡಾ ಹೌದು. ಇದನ್ನೇ ತತ್ವಜ್ಞಾನಿಗಳ ದಿನಾಚರಣೆ ಎಂತಲೂ ಆಚರಿಸುತ್ತಾರೆ.

Advertisement

8ನೇ ಶತಮಾನದಲ್ಲಿ ಭಾರತವು ಹಲವು ಧರ್ಮಗಳಲ್ಲಿ ಹಂಚಿ ಹೋಗಿತ್ತು. ಅಂಥಹ ಸಂಕೀರ್ಣ ಪರಿಸ್ಥಿತಿಯಲ್ಲಿ ಸನಾತನ ಧರ್ಮವನ್ನುಳಿಸಲು ಉದಯಿಸಿದ ಸೂರ್ಯ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು. ಶ್ರೀ ಶಂಕರಾಚಾರ್ಯರಿಗಿಂತ ಮೊದಲು ಹಲವಾರು ಯತಿಗಳು, ಸಂತರು, ಜ್ಞಾನಿಗಳು ಆಗಿ ಹೋಗಿದ್ದರು. ಆದರೆ, ಅವರಾರೂ ಶಂಕರರಷ್ಟು ಚಾಣಾಕ್ಷ, ತೀಕ್ಷ್ಣ ಬುದ್ಧಿ, ಹರಿತವಾದ ವಿಚಾರ ಧಾರೆಯುಳ್ಳವಂರಾಗಿರಲಿಲ್ಲ. ಇದೇ ಕಾರಣಕ್ಕಾಗಿ ಇಂದಿಗೂ ಶ್ರೀ ಶಂಕರು ಸನಾತನ ಹಿಂದೂ ಸಂಸ್ಕೃತಿಯಲ್ಲಿ ಪೂಜ್ಯ ಭಾವನೆಯಿಂದ ಅನುಕರಿಸಲ್ಪಡುತ್ತಾರೆ ಮತ್ತು ಆರಾಧಿಸಲ್ಪಡುತ್ತಾರೆ.

ಸನಾತನ ಸಂಸ್ಕೃತಿಯು ವಿನಾಶದ ಅಂಚಿನಲ್ಲಿದ್ದಾಗ ಶ್ರೀ ಶಂಕರರು ಸನಾತನ ವೈದಿಕ ಪರಂಪರೆಯನ್ನು ಪುನರ್ ಸ್ಥಾಪನೆ ಮಾಡಿದ ಮಹಾನ್ ಚೇತನರು. ಕ್ರಿ.ಶ. 7ನೇ ಶತಮಾನದಲ್ಲಿ ಬೌದ್ಧ ಧರ್ಮವು ಉಛ್ರಾಯ ಸ್ಥಿತಿಯಲ್ಲಿದ್ದು, ಸನಾತನ ಹಿಂದೂ ಧರ್ಮವು ಅಧಃಪತನದ ಹಾದಿಯಲ್ಲಿತ್ತು. ಆಗ ಬೌದ್ಧರು, ಜೈನರು, ಕಾಪಾಲಿಕರು ಹಿಂದೂ ಧರ್ಮದ ವಿರೋಧಿಗಳಾಗಿದ್ದರು. ಚಾರ್ವಾಕರು ದೇವರೆಂಬುದು ಸುಳ್ಳು, ದೈವಿಶಕ್ತೀಯೆಂಬುದು ಮೌಢ್ಯ ಎಂದು ಪ್ರತಿಪಾದಿಸುತ್ತಿದ್ದ ಕಾಲ.

ಹೀಗೆ ಭಾರತೀಯ ಸನಾತನಿಯರು ಗೊಂದಲದಲ್ಲಿದ್ದಾಗ ಅವತರಿಸಿದವರೇ ಶ್ರೀ ಶಂಕರರು. ಕೇರಳದ ಪೂರ್ಣಾ ನದಿಯ ತಟದಲ್ಲಿದ್ದ ಕಾಲಟಿ ಎಂಬ ಗ್ರಾಮದಲ್ಲಿ ವಾಸವಾಗಿದ್ದ ನಂಬೂದರಿ ಬ್ರಾಹ್ಮಣ ಕುಟುಂಬದಲ್ಲಿ ಕ್ರಿ.ಶ. 788ರ ವೈಶಾಖ ಶುದ್ಧ ಪಂಚಮಿಯಂದು ಶಿವಗುರು ಹಾಗೂ ಆರ್ಯಾಂಬಾ ಇವರ ಸಂತಾನವಾಗಿ, ಶ್ರೀ ಶಂಕರರು ಸಾಕ್ಷಾತ್ ಪರಶಿವನ ಅವತಾರವಾಗಿ ಜನಿಸಿದರು.

ಚಿಕ್ಕವರಾಗಿದ್ದಾಗಲೇ ಬಾಲ ಶಂಕರಂರಲ್ಲಿದ್ದ ಕಲಿಕಾ ತೀಕ್ಷಣತೆ, ಗ್ರಹಿಕಾ ತೀಕ್ಷಣತೆಯನ್ನು ಅರ್ಥೈಸಿಕೊಳ್ಳಲು ಕೆಲವು ಘಟನೆಗಳನ್ನು ನಾವು ನೆನಪಿಸಿಕೊಳ್ಳಬೇಕು. ಒಂದು ದಿನ ಬಾಲ ಶಂಕರರು ಒಂದು ಗುಡಿಸಲಿನ ಮುಂದೆ ಬಂದು ನಿಂತು ಭವತಿ ಭಿಕ್ಷಾಂದೇಹಿ ಎಂದು ಭಿಕ್ಷೆಗಾಗಿ ಬಂದು ನಿಲ್ಲುತ್ತಾರೆ. ಆಗ ಆ ಮನೆಯಲ್ಲಿದ್ದ ಕಡುಬಡವ ಮಹಿಳೆ ಸೂರ್ಯನಂತೆ ಪ್ರಜ್ವಲಿಸುತ್ತಿರುವ ಈ ಬಾಲ ಸಂನ್ಯಾಸಿಯನ್ನು ನೋಡಿ, ಮಗು, ನಾನೊಬ್ಬ ಬಡವೆ. ನನ್ನ ಮನೆಯಲ್ಲಿ ನಿನಗೆ ಕೊಡಲು ಏನೂ ಇಲ್ಲ ಎಂದು ನೊಂದು ಕಣ್ಣಿನಂಚಿನಲ್ಲಿ ನೀರನ್ನು ತಂದುಕೊಳ್ಳುತ್ತಾಳೆ. ಇದನ್ನು ನೋಡಿದ ಬಾಲ ಶಂಕರರು ಅಮ್ಮಾ ನಿನ್ನ ಮನೆಯಲ್ಲಿರುವ ಏನನ್ನೇ ಭಿಕ್ಷೆ ನೀಡಿದರೂ ಸಂತೋಷದಿAದ ಸ್ವೀಕರಿಸುತ್ತೇನೆ ಎನ್ನುತ್ತಾರೆ.

ಆಗ ಆ ಮಹಿಳೆ ಒಳಗೆ ಹೋಗಿ ಮನೆಯನ್ನೆಲ್ಲಾ ಹುಡುಕಾಡಿದಾಗ ಮನೆಯ ಮೂಲೆಯಲ್ಲಿ ಒಂದು ಪಾತ್ರೆಯಲ್ಲಿ ಒಂದು ಒಣಗಿದ ನೆಲ್ಲಿಕಾಯಿ ಅವಳಿಗೆ ದೊರೆಯುತ್ತದೆ. ಅದನ್ನೇ ತಂದು ಬಾಲ ವಟುವಿನ ಜೋಳಿಗೆಯಲ್ಲಿ ಬಹು ದುಃಖದಿಂದ ಹಾಕುತ್ತಾಳೆ. ಅದನ್ನು ಕಂಡು ಶಂಕರರು ಅತೀ ವಾತ್ಸಲ್ಯ ಭರಿತರಾಗಿ ತೃಪ್ತಿಯಿಂದ ಮಹಿಳೆಯ ಪರಿಸ್ಥಿತಿಯನ್ನು ಕಂಡು ಸಿರಿದೇವಿ ಲಕ್ಷ್ಮೀಯನ್ನು ಮನದಲ್ಲಿ ಆಹ್ವಾನಿಸಿ ಕನಕಧಾರಾ ಸ್ತೋತ್ರವನ್ನು ರಚಿಸಿ ಕಂಠೋದ್ಗದಿತವಾಗಿ ಹಾಡುತ್ತಾರೆ. ಆಗ ಆ ಬಡ ಮಹಿಳೆಯ ಮನೆಯಂಗಳದಲ್ಲಿ ಬಂಗಾರದ ನೆಲ್ಲಿಕಾಯಿಗಳ ವೃಷ್ಟಿಯಾಗುತ್ತದೆ. ಇದು ಬಾಲ್ಯದಲ್ಲಿಯೇ ಶಂಕರರು ಗಳಿಸಿದ ಪಾಂಡಿತ್ಯ ಹಾಗೂ ದೈವಾನುಗ್ರಹಕ್ಕೆ ಸಾಕ್ಷಿ. ಇದಕ್ಕೆ ಪುರಾವೆ ಎಂಬಂತೆ ಇಂದಿಗೂ ಕಾಲಟಿಯ ಸಮಿಪ ಗ್ರಾಮ ಒಂದರಲ್ಲಿ ಸ್ವರ್ಣ ನೆಲ್ಲಿಕಾಯಿಯ ಮಳೆಯಿಂದ ಪುನೀತರಾದ ಕುಟುಂಬ ಸ್ವರ್ಣತಿಲ್ಲಂ ಎಂಬ ಹೆಸರಿನಿಂದ ಸಂತೃಪ್ತ ಜೀವನ ನಡೆಸುತ್ತಿರುವುದನ್ನು ನಾವು ಕಾಣಬಹುದು.

ಮುಂದೆ, ಸನಾತನ ಧರ್ಮದ ಉಳಿವಿಗಾಗಿ, ಪುನರುತ್ಥಾನಕ್ಕಾಗಿ ಗುರುವಿನ ಆಜ್ಞೆಯಂತೆ ಮನೋವೇಗದಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ದೇಶದ ನಾಲ್ಕು ದಿಕ್ಕುಗಳಲ್ಲಿ, ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸುತ್ತಾರೆ. ಕೇವಲ 32 ವರ್ಷಗಳಲ್ಲಿ ಭಾರತದಾದ್ಯಂತ ಕಾಲ್ನಡಿಗೆಯಲ್ಲಿ ಪರ್ಯಟನೆ ಮಾಡಿ ಅವನತಿಯ ಹಾದಿಯಲ್ಲಿದ್ದ ಸನಾತನ ವೈದಿಕ ಧರ್ಮವನ್ನು ಪನರುತ್ಥಾನ ಮಾಡಿದ್ದಲ್ಲದೇ ಹಲವಾರು ಪಂಡಿತರನ್ನೂ, ಶಾಸ್ತçವೇತ್ತರನ್ನೂ ಜಯಿಸಿ, ಸರ್ವಜ್ಞ ಪೀಠವನ್ನೇರಿದರು.

ಶ್ರೀ ಆದಿ ಶಂಕರಾಚಾರ್ಯರು 18 ಭಾಷ್ಯ ಗ್ರಂಥಗಳನ್ನೂ, 23 ಪ್ರಕರಣ ಗ್ರಂಥಗಳನ್ನೂ ಹಾಗೂ 73ಕ್ಕೂ ಹೆಚ್ಚು ಧ್ಯಾನ ಪದ್ಯಗಳನ್ನು ಮತ್ತು ಸ್ತೋತ್ರಗಳನ್ನು ರಚಿಸಿದ್ದಾರೆ. ಶ್ರೀ ಶಂಕರರ ಇನ್ನಿತರ ಪ್ರಮುಖ ಅತೀ ಪ್ರಚಲಿತವಿರುವ ಕೃತಿಗಳು ಎಂದರೆ ವಿವೇಕ ಚೂಡಾಮಣಿ, ಭಜಗೋವಿಂದ, ಶಿವಾನಂದ ಲಹರಿ, ಗಂಗಾ ಸ್ತವನ ಮುಂತಾದವುಗಳು. 8ನೇ ಶತಮಾನದಲ್ಲಿ ವಿವಿಧ ಧರ್ಮದ ಆಧಾರದ ಮೇಲೆ ಹರಿದು ಹಂಚಿ ಹೋಗಿದ್ದ ಹಲವಾರು ರಾಜ್ಯಗಳನ್ನು ನಾವೆಲ್ಲಾ ಹಿಂದೂಗಳು ಎಂದು ಏಕ ರಾಷ್ಟçವಾದವನ್ನೂ ಪ್ರತಿಪಾದಿಸಿ ಅವರಲ್ಲರನ್ನೂ ಒಂದುಗೂಡಿಸಿದ ಕೀರ್ತಿ ಈ ಮಹಾನ್ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರಿಗೆ ಸಲ್ಲುತ್ತದೆ.

ಸನಾತನ ಧರ್ಮ ಹಾಗೂ ಹಿಂದು ಧರ್ಮದ ಮೇಲೆ ಆಕ್ರಮಣವಾದಾಗ ಅವುಗಳನ್ನು ರಕ್ಷಿಸುವುದಕ್ಕಾಗಿ ಶಾಸ್ತç ವಿದ್ಯೆ ಸಹಿತ ಶಸ್ತ್ರ ಹಿಡಿದ ನಾಗಾ ಸಾಧು ಪಂಥವನ್ನು ಹುಟ್ಟು ಹಾಕಿದರು. ಈ ರೀತಿಯಾಗಿ ಭರತ ಖಂಡದ ಅಸ್ಥಿತ್ವಕ್ಕೆ ಕಾರಣರಾದ ಶ್ರೀ ಶಂಕರಾಚಾರ್ಯರ ಜಯಂತಿನ್ನು ಪ್ರತಿ ವರ್ಷ ವೈಶಾಖ ಶುದ್ಧ ಪಂಚಮಿಯನ್ನು `ತತ್ವಜ್ಞಾನಿಗಳ ದಿನಾಚರಣೆ’ಯನ್ನಾಗಿ ಆಚರಿಸುತ್ತಾರೆ. ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರ ಸಾಧನೆಗಳನ್ನು ಸದಾಕಾಲವೂ ಅರಿತು ಪಾಲಿಸಿ, ಅನುಸರಿಸಿ, ಅಖಂಡ ಭಾರತದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸೊಣ.

ಶಂಕರ ಲೋಕ ಶಂಕರಮ್…

– ರಾಮಚಂದ್ರ ಮೋನೆ.

ಅಧ್ಯಕ್ಷರು, ಅದ್ವೈತ ಪ್ರಸಾರ ಪರಿಷತ್, ಗದಗ.


Spread the love

LEAVE A REPLY

Please enter your comment!
Please enter your name here