ದಾವಣಗೆರೆ:- ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡುವವರನ್ನು ಗುಂಡಿಕ್ಕಿ ಹತ್ಯೆ ಮಾಡ್ಬೇಕು ಎಂದು ಬಿಜೆಪಿ ಮುಖಂಡ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮಂಗಳೂರಲ್ಲಿ ನಡೆದ ಅಶ್ರಫ್ ಹತ್ಯೆ ಕೇಸಲ್ಲಿ 20 ಜನರ ಬಂಧನವಾಗಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಕೇಸಲ್ಲಿ ಇನ್ನೂ ಒಬ್ಬ ಆರೋಪಿಯನ್ನೂ ಬಂಧಿಸಿಲ್ಲ ಎಂದರು.
ನಮ್ಮ ದೇವಸ್ಥಾನಗಳಿಗೆ ಹೋದರೆ ಪೂಜೆ ಭಜನೆ ಇರುತ್ತದೆ. ಮದರಸಗಳಲ್ಲಿ ಮಕ್ಕಳಿಗೆ, ಹಿಂದೂಗಳ ಮೇಲೆ ಕಲ್ಲು ಹೊಡೆಯೋದು, ಕೊಲೆ ಮಾಡೋದು ಕಲಿಸಿ ಕೊಡ್ತಾರೆ. ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡುವವರನ್ನು ಗುಂಡಿಕ್ಕಿ ಹತ್ಯೆ ಮಾಡ್ಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಹಿಂದೂ ಕಾರ್ಯಕರ್ತನನ್ನು ಮುಸ್ಲಿಂ ಜಿಹಾದಿಗಳು ಕೊಲೆ ಮಾಡಿದ್ದನ್ನು ನಾನು ಖಂಡಿಸುತ್ತೇನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸರಿಗೂ ಸಹ ಇಲ್ಲಿ ರಕ್ಷಣೆ ಇಲ್ಲದಂತಾಗಿದೆ. ಇದೇ ಮಂಗಳೂರಿನಲ್ಲಿ ಕಳೆದ ಕೆಲ ದಿನಗಳ ಹಿಂದೆ ಅಶ್ರಫ್ ಎನ್ನುವನು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಕ್ಕೆ, ಭಾರತ ಮಾತೆಯ ಮಕ್ಕಳಿಗೆ ನೋವಾಗಿ ಹಲ್ಲೆ ಮಾಡಿದ್ದರು.
ಈ ವೇಳೆ ಆತ ಸಾವನ್ನಪ್ಪಿದ್ದ. ಆ ಪ್ರಕರಣವನ್ನೂ ತನಿಖೆ ಮಾಡಲಿ, ಆದರೆ ಈಗ ಹಿಂದೂ ಕಾರ್ಯಕರ್ತನನ್ನು ಕೊಲೆಯಾಗಿ ಇಷ್ಟೋತ್ತಾದರೂ ಬಂಧನ ಮಾಡಿಲ್ಲ. ಸಾರ್ವಜನಿಕವಾಗಿ ಕೊಲೆ ಮಾಡಿದ್ರೂ ಯಾವುದೇ ಕ್ರಮ ಆಗಿಲ್ಲ ಎಂದು ಕಿಡಿಕಾರಿದ್ದಾರೆ.