ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: 2025ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಲಕ್ಷ್ಮೇಶ್ವರ ತಾಲೂಕು ಗದಗ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಲಕ್ಷ್ಮೇಶ್ವರದ ಎಸ್ಟಿಪಿಎಂಬಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ ಸಂಪದಾ ಕುಲಕರ್ಣಿ ಮತ್ತು ಇದೇ ಶಾಲೆಯ ಖದೀಜಾ ಪಿ.ಸೂರಣಗಿ, ಗೊಜನೂರಿನ ಮೊರಾರ್ಜಿ ವಸತಿ ಶಾಲೆಯ ರಿಹಾನ್ ಶಿರಬಡಗಿ 625ಕ್ಕೆ 623 ಅಂಕ ಗಳಿಸಿ ರಾಜ್ಯಕ್ಕೆ 3ನೇ ಸ್ಥಾನ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಗೊಜನೂರಿನ ಮೊರಾರ್ಜಿ ವಸತಿ ಶಾಲೆಯ ಉದಯ ಕಟ್ಟೆಣ್ಣವರ, ಸ್ಪೂರ್ತಿ ಪ್ರಕಾಶ ಮಣ್ಣಮ್ಮನವರ ಮತ್ತು ಲಕ್ಷ್ಮೇಶ್ವರದ ಲಿಟಲ್ ಹಾರ್ಟ್ ಇಂಟರ್ನ್ಯಾಶನಲ್ ಶಾಲೆಯ ಸುಮೀತಗೌಡ ನರಸಮ್ಮನವರ, ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಶಾಲೆಯ ಸೋಹಾ ನದಾಫ್ 625ಕ್ಕೆ 622 ಅಂಕ ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಲಕ್ಷ್ಮೇಶ್ವರ ಎಸ್ಟಿಎಂಬಿ ಶಾಲೆಯ ಜಯಂತ ಎಸ್.ನವಲಗುಂದ 621 ಅಂಕ ಗಳಿಸಿ ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳ ಸಾಧನೆಗೆ ಬಿಇಓ, ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.