ತಿರುವನಂತಪುರಂ:– ರೇಬೀಸ್ ರೋಗಕ್ಕೆ ತುತ್ತಾಗಿದ್ದ 7 ವರ್ಷದ ಬಾಲಕಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ಜರುಗಿದೆ. ಮೃತ ಬಾಲಕಿಯನ್ನು ನಿಯಾ ಫೈಸಲ್ ಎಂದು ಗುರುತಿಸಲಾಗಿದೆ.
ಬಾಲಕಿಗೆ ರೇಬೀಸ್ ಪತ್ತೆಯಾದ ಬಳಿಕ ಆಕೆಯನ್ನು ವೆಂಟಿಲೇಟರ್ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಈ ಸಾವಿನೊಂದಿಗೆ ಕಳೆದ ಒಂದು ತಿಂಗಳೊಳಗೆ ಕೇರಳದಲ್ಲಿ ರೇಬೀಸ್ ಸೋಂಕಿನಿಂದ ಸಾವನ್ನಪ್ಪಿದ ಮಕ್ಕಳ ಸಂಖ್ಯೆ ಮೂರಕ್ಕೆ ಏರಿದೆ. ಏಪ್ರಿಲ್ 8 ರಂದು ಬಾಲಕಿ ಅಂಗಳದಲ್ಲಿ ಆಟವಾಡುತ್ತಿದ್ದಾಗ ಬೀದಿ ನಾಯಿ ಕಚ್ಚಿತ್ತು. ಅಂಗಳದಲ್ಲಿದ್ದ ಬಾತುಕೋಳಿ ಮೇಲೆ ದಾಳಿ ಮಾಡಲು ಮುಂದಾಗಿದ್ದಾಗ ಬಾಲಕಿ ರಕ್ಷಿಸಲು ಹೋಗಿದ್ದಳು. ಈ ವೇಳೆ ನಾಯಿ ಬಾಲಕಿಯ ಮೊಣಕೈಗೆ ಕಚ್ಚಿತ್ತು.
ಬಾಲಕಿಯನ್ನು ಕೂಡಲೇ ವಿಲಕ್ಕುಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ರೇಬೀಸ್ ಲಸಿಕೆಯ ಮೊದಲ ಡೋಸ್ ನೀಡಲಾಯಿತು. ಆದ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.