ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬಂಗಾರದ ರೇಟ್ ಯಾರೂ ಊಹಿಸದಷ್ಟು ಗಗನಕ್ಕೇರಿದೆ. ಬಂಗಾರಕ್ಕೆ ಭಾರತದಲ್ಲಿ ಯಾವತ್ತೂ ಡಿಮ್ಯಾಂಡ್ ಕಮ್ಮಿ ಆಗೋದೇಯಿಲ್ಲ. ಹಬ್ಬ, ಮದುವೆ ಇವುಗಳು ನೆಪವಷ್ಟೇ, ಇಲ್ಲಿ ಯಾವಾಗಲೂ ಬಂಗಾರದ ಖರೀದಿ ನಡೆಯುತ್ತಲೇ ಇರುತ್ತದೆ.
ಬಂಗಾರ ಕೇವಲ ವ್ಯಕ್ತಿಯ ಸಂಪತ್ತನ್ನಲ್ಲದೆ ದೇಶದ ಆರ್ಥಿಕ ಶಕ್ತಿಯ ಸಂಕೇತವೂ ಆಗಿದ್ದು, ಇಂದು ಯಾವುದೇ ದೇಶ ತಾನು ಹೊಂದಿರುವ ಚಿನ್ನದ ಪ್ರಮಾಣಕ್ಕನುಗುಣವಾಗಿ ತನ್ನ ಆರ್ಥಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂದರೆ ತಪ್ಪಾಗಲಾರದು.
ಚಿನ್ನದ ಬೆಲೆ ಗ್ರಾಮ್ಗೆ 16 ರೂನಿಂದ 22 ರೂವರೆಗೆ ಏರಿಕೆ ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 20 ರೂ ಹೆಚ್ಚಳವಾಗಿದೆ. ವಾರಾಂತ್ಯದಲ್ಲಿ 8,755 ರೂ ಇದ್ದ ಇದರ ಬೆಲೆ ಸೋಮವಾರ 8,775 ರೂಗೆ ಏರಿದೆ. ದೆಹಲಿ ಇತ್ಯಾದಿ ಕೆಲವೆಡೆ ಬೆಲೆ 8,790 ರೂಗೆ ಏರಿದೆ. ವಿದೇಶ ಮಾರುಕಟ್ಟೆಗಳಲ್ಲಿ ಮಲೇಷ್ಯಾದಂತಹ ಕೆಲ ದೇಶಗಳಲ್ಲಿ ಚಿನ್ನದ ಬೆಲೆ ಕಡಿಮೆ ಆಗಿದೆ. ಹೆಚ್ಚಿನ ಕಡೆ ಯಥಾಸ್ಥಿತಿ ಇದೆ.
ದುಬೈ, ಅಮೆರಿಕದಲ್ಲಿ ಬೆಲೆ ತುಸು ಏರಿಕೆ ಆಗಿದೆ. ಬೆಳ್ಳಿ ಬೆಲೆ ಭಾರತದಲ್ಲಿ ಸೋಮವಾರ ಮಿಶ್ರಫಲ ನೀಡಿದೆ. ಬೆಂಗಳೂರು, ಮುಂಬೈ ಮೊದಲಾದೆಡೆ ಬೆಲೆ ಒಂದು ರೂ ಏರಿಕೆ ಆಗಿದೆ. 98 ರೂ ಇದ್ದ ಬೆಲೆ 97 ರೂಗೆ ಇಳಿದಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಳ್ಳಿ ಬೆಲೆ ಒಂದು ರೂ ಹೆಚ್ಚಳ ಆಗಿದೆ.
107 ರೂನಿಂದ 108 ರೂಗೆ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 87,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 95,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 87,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,700 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 5ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,750 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,730 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,800 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,750 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,730 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 87,750 ರೂ
- ಚೆನ್ನೈ: 87,750 ರೂ
- ಮುಂಬೈ: 87,750 ರೂ
- ದೆಹಲಿ: 87,900 ರೂ
- ಕೋಲ್ಕತಾ: 87,750 ರೂ
- ಕೇರಳ: 87,750 ರೂ
- ಅಹ್ಮದಾಬಾದ್: 87,800 ರೂ
- ಜೈಪುರ್: 87,900 ರೂ
- ಲಕ್ನೋ: 87,900 ರೂ
- ಭುವನೇಶ್ವರ್: 87,750 ರೂ