ಜಿಲೇಬಿ ಮತ್ತು ಶರಬತ್ ನಲ್ಲಿ ಕೃತಕ ಬಣ್ಣ ಬಳಕೆ: ಕಾರ್ಯಚರಣೆಗೆ ಆಹಾರ ಸುರಕ್ಷತೆ & ಗುಣಮಟ್ಟ ಇಲಾಖೆ ಸಿದ್ದ

0
Spread the love

ಬೆಂಗಳೂರು: ಪ್ರತಿನಿತ್ಯ ನಾವು ತಿನ್ನುವ ಬಹುತೇಕ ಆಹಾರ ಪದಾರ್ಥಗಳಲ್ಲಿ ವಿಷಕಾರಿ ಅಂಶಗಳೇ ತುಂಬಿದ್ದು, ಇದೀಗ ಆಹಾರ ಇಲಾಖೆ ವರದಿಯೊಂದು ನೀಡಿದೆ.  ಜಿಲೇಬಿ ಮತ್ತು ಶರಬತ್ ನಲ್ಲಿ ಕೃತಕ ಬಣ್ಣ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕಾರ್ಯಚರಣೆಗೆ ಸಿದ್ದವಾಗಿದೆ.

Advertisement

ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸ್ವಚ್ಚತೆ ಕಾಪಾಡದೇ ತಯಾರಿಸಲಾಗುತ್ತಿರುವ ಜಿಲೇಬಿ ಮತ್ತು ಶರಬತ್ ಮಾದರಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಪ್ರತಿ ಜಿಲ್ಲೆಯ ಅಂಕಿತಾಧಿಕಾರಿ ವ್ಯಾಪ್ತಿಯಲ್ಲಿ ತಲಾ ಐದು ಮಾದರಿ ಸಂಗ್ರಹಿಸಿ, ಮೂರು ದಿನಗಳ ಒಳಗೆ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಇಲಾಖೆ ಸೂಚಿಸಿದೆ.


Spread the love

LEAVE A REPLY

Please enter your comment!
Please enter your name here