ಹಿಂದೆಲ್ಲಾ ಗಡಿಗೆಯಲ್ಲಿ ಹಾಲಿನ ಕೆನೆ ಉಳಿದರೆ ಹಿರಿಯರು ಅದನ್ನು ಮುಖಕ್ಕೆ ಒರೆಸುತ್ತಿದ್ದ ನೆನಪು. ಆದರೆ ಅಜ್ಜಿ ಹಾಗೆ ಏಕೆ ಮಾಡುತ್ತಿದ್ದರು ಎಂದು ತಿಳಿದದ್ದು ನಾವೆಲ್ಲಾ ದೊಡ್ಡವನಾದ ಮೇಲೆಯೇ! ಈ ಹಾಲಿನ ಕೆನೆ ನಮ್ಮ ದೇಹದ ಆರೋಗ್ಯಕ್ಕೆ ಮಾತ್ರವಲ್ಲದೇ, ಚರ್ಮದ ಆರೋಗ್ಯವನ್ನು ಕಾಪಾಡುವುದರಲ್ಲಿ ಎತ್ತಿದ ಕೈ.
ಆದರೆ ಬಹುತೇಕರು ಇದರ ಮಹತ್ವ ತಿಳಿಯದೆ ಸೋಸಿ, ನಿರುಪಯುಕ್ತವೆಂದು ಎಸೆದು ಬಿಡುತ್ತಾರೆ. ಆದರೆ ಇಂದು ನಾವಿಲ್ಲಿ ಹೇಳಿರುವ ಹಾಲಿನ ಕೆನೆಯ ಮಹತ್ವ ತಿಳಿದರೆ ನೀವು ಹಾಲಿನ ಕೆನೆ ಚೆಲ್ಲುವುದಿರಲಿ, ಹಾಲನ್ನು ತರಿಸಿ ಕೆನೆ ಬರುವುದನ್ನೇ ಕಾಯುತ್ತೀರಿ!
ಹಾಲು ಮತ್ತು ಹಾಲಿನ ಕ್ರೀಮ್
- ಎಲ್ಲರ ಮನೆಯಲ್ಲಿ ಹಾಲಂತೂ ಇದ್ದೇ ಇರುತ್ತದೆ. ಹಾಲಿನಿಂದ ನಮ್ಮ ಸೌಂದರ್ಯವನ್ನು ವೃದ್ಧಿಸಿ ಕೊಳ್ಳಬಹುದು ಎನ್ನುವ ಸತ್ಯ ಮಾತ್ರ ಹಲವರಿಗೆ ತಿಳಿದಿರುವುದಿಲ್ಲ.
- ಹಾಲು ಮತ್ತು ಹಾಲಿನ ಕ್ರೀಮ್ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಹೇಗೆಲ್ಲಾ ನಮ್ಮ ತ್ವಚೆಗೆ ಇದನ್ನು ಬಳಸಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ….
ನಿಮ್ಮ ಸಾಧಾರಣ ತ್ವಚೆಗೆ
- ನೈಸರ್ಗಿಕವಾದ ರೀತಿಯಲ್ಲಿ ಯಾವುದೇ ತೊಂದರೆ ಇಲ್ಲದೆ ಇರುವ ನಿಮ್ಮ ಸಾಧಾರಣ ತ್ವಚೆಯನ್ನು ಆರೈಕೆ ಮಾಡಬಹುದಾದ ವಿಧಾನವನ್ನು ನೋಡುವುದಾದರೆ ಅದು ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ಎನ್ನುವುದು ಸಾಬೀತಾಗಿದೆ.
- ಇದು ನಿಮ್ಮ ತ್ವಚೆಯನ್ನು ಕೋಮಲವಾಗಿರುವಂತೆ ಮಾಡುವುದು ಮಾತ್ರವಲ್ಲದೆ ಚರ್ಮದಲ್ಲಿನ ಕಲ್ಮಶಗಳನ್ನು ಹೋಗಲಾಡಿಸಿ ಸುಂದರವಾಗಿ ಕಾಣುವಂತೆ ಮಾಡುತ್ತದೆ.
ಕೆಳಗಿನಂತೆ ಒಮ್ಮೆ ಟ್ರೈ ಮಾಡಿ ನೋಡಿ
ಶ್ರೀಗಂಧ, ಮಲಾಯಿ, ಕಡಲೆ ಹಿಟ್ಟು, ರೋಸ್ ಆಯಿಲ್, ಜೇನುತುಪ್ಪ ಮತ್ತು ಅರಿಶಿನ ಎಲ್ಲವನ್ನು ಒಮ್ಮೆ ಮಿಶ್ರಣ ಮಾಡಿ ನಿಮ್ಮ ಮುಖದ ಹಾಗೂ ಕುತ್ತಿಗೆಯ ಭಾಗದಲ್ಲಿ ಅನ್ವಯಿಸಿ. ಸ್ವಲ್ಪ ಹೊತ್ತು ಹಾಗೆ ಇರಲು ಬಿಟ್ಟು ಆನಂತರ ಸಾಧಾರಣ ನೀರಿನಲ್ಲಿ ತೊಳೆದುಕೊಳ್ಳಿ.
ಒಣ ಚರ್ಮ ಇರುವವರು
ಯಾರಿಗೆ ಒಳ್ಳೆ ಚರ್ಮ ಇರುತ್ತದೆ ಅವರಿಗೆ ತ್ವಚೆಯಲ್ಲಿ ತೇವಾಂಶ ಕಡಿಮೆ. ಏಕೆಂದರೆ ಸುಲಭವಾಗಿ ತೇವಾಂಶ ಹೀರಿಕೊಳ್ಳುತ್ತದೆ. ಯಾವಾಗಲೂ ತ್ವಚೆಯಲ್ಲಿ ತೇವಾಂಶ ಇರಬೇಕು ಎಂದರೆ ನೀವು ಈ ಹಾಲಿನ ಕೆನೆ ಪ್ಯಾಕ್ ಟ್ರೈ ಮಾಡಬಹುದು. ಇದು ನಿಮ್ಮ ತ್ವಚೆಯ ತಾಜಾತನ ಮತ್ತು ಹೊಳಪನ್ನು ಹೆಚ್ಚಿಸುತ್ತದೆ.
ಇದಕ್ಕೆ ನೀವು ಮಾಡಬೇಕಾದ ಪ್ರಕ್ರಿಯೆ
- ಹಾಲಿನ ಕೆನೆ ಮತ್ತು ಕಡಲೆ ಹಿಟ್ಟು ಎರಡನ್ನು ತೆಗೆದುಕೊಂಡು ಹಾಲಿನ ಜೊತೆ ಮಿಶ್ರಣ ಮಾಡಿ ಅದನ್ನು ನಿಮ್ಮ ಮುಖ, ಕೈಕಾಲುಗಳಿಗೆ ಅನ್ವಯಿಸಿ.
- ಇದನ್ನು ಸ್ವಲ್ಪ ಹೊತ್ತು ಆರಲು ಬಿಟ್ಟು ನಂತರ ನೀರಿನಲ್ಲಿ ತೊಳೆದುಕೊಳ್ಳಿ.
- ವಾರಕ್ಕೊಂದು ಸಾರಿ ಈ ಪ್ರಕ್ರಿಯೆಯನ್ನು ನೀವು 15 ನಿಮಿಷಗಳ ಕಾಲ ಸ್ನಾನಕ್ಕೆ ಮಂಚೆ ಅನುಸರಿಸ ಬಹುದು.
ನಿಮ್ಮ ತ್ವಚೆ ಬೆಳ್ಳಗಾಗಲು
ಹಾಲಿನ ಬಗ್ಗೆ ನಿಮಗೆ ಗೊತ್ತೇ ಇದೆ. ಇದು ನಿಮ್ಮ ತ್ವಚೆಯನ್ನು ಕ್ರಮೇಣವಾಗಿ ಬಿಳಿ ಬಣ್ಣಕ್ಕೆ ತಿರುಗಿಸುತ್ತದೆ. ಇದಕ್ಕೆ ಕಾರಣ ಏನೆಂದರೆ ಹಾಲಿನಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲ. ಇದು ಚರ್ಮದ ಮೇಲಿರುವ ಕಲೆಗಳನ್ನು ಹೋಗಲಾಡಿಸಿ ನಿಮ್ಮ ತ್ವಚೆಯ ಸೌಂದರ್ಯವನ್ನು ಮತ್ತು ಹೊಳಪನ್ನು ಹೆಚ್ಚಿಸುತ್ತದೆ.