ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದೀಗ ಮಾದಕವಸ್ತು ಮಾರಾಟ ಮಾಡುತ್ತಿದ್ದ ಘಾನಾ ದೇಶದ ಪ್ರಜೆಯನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
Advertisement
ಒವುಸು ಕಾಲಿನ್ಸ್ (35) ಬಂಧಿತ ಆರೋಪಿಯಾಗಿದ್ದು, ವೈದ್ಯಕೀಯ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಆರೋಪಿ, ಮಾದಕವಸ್ತುಗಳ ಮಾರಾಟದಲ್ಲಿ ತೊಡಗಿದ್ದ. ಈ ಹಿಂದೆ ಆರೋಪಿಯನ್ನು ಬಂಧಿಸಿದ್ದ ಮಾರತ್ ಹಳ್ಳಿ ಠಾಣೆ ಪೊಲೀಸರು ಭಾರತದಿಂದ ಗಡಿಪಾರು ಮಾಡಿದ್ದರು.
ಆದರೆ ಮತ್ತೆ ಬಂದಿದ್ದ ಆರೋಪಿ, ಮತ್ತೋರ್ವ ವಿದೇಶಿ ಪ್ರಜೆಯಿಂದ ಕಡಿಮೆ ಬೆಲೆಗೆ ಮಾದಕವಸ್ತುಗಳನ್ನು ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಬಂಧಿತನಿಂದ 52.15 ಲಕ್ಷ ಮೌಲ್ಯದ 416 ಗ್ರಾಂ ಎಂಡಿಎಂ, 1 ಕಾರು, 1 ದ್ವಿಚಕ್ರ ವಾಹನ, ತೂಕದ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ.