ಖ್ಯಾತ ಗಾಯಕ ಸೋನು ನಿಗಮ್ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರ ನಡವಳಿಕೆ ಸಾಕಷ್ಟು ಟೀಕೆಗೆ ಕಾರಣವಾಗಿತ್ತು. ಕಾರ್ಯಕ್ರಮದಲ್ಲಿ ಕನ್ನಡದ ಹಾಡು ಹೇಳುವಂತೆ ಸೋನು ನಿಗಮ್ಗೆ ಕೇಳಲಾಯಿತು. ಈ ವೇಳೆ ಸೋನು ನಿಗಮ್ ಅವರು ‘ಕನ್ನಡ.. ಕನ್ನಡ.. ಈ ಕಾರಣಕ್ಕೆ ಪಹಲ್ಗಾಮ್ ದಾಳಿ ಆಯಿತು’ ಎಂದು ವಿವಾದ ಸೃಷ್ಟಿಸಿದ್ದರು. ಕನ್ನಡಿಗರಿಗೆ ಅವಮಾನ ಮಾಡಿದ ಅವರನ್ನು ಬ್ಯಾನ್ ಮಾಡುವ ಬಗ್ಗೆ ಸ್ಯಾಂಡಲ್ವುಡ್ನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬೆನ್ನಲ್ಲೇ ಅವರು ಕ್ಷಮೆ ಕೇಳಿದ್ದಾರೆ. ಭವಿಷ್ಯದಲ್ಲಿ ಈ ರೀತಿಯ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸರು ಹೊಸ ಸೂಚನೆ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕಾನ್ಸರ್ಟ್ ಮಾಡಿದಾಗ ಯಾರಾದರೂ ಕನ್ನಡ ಹಾಡು ಕೇಳಿದರೆ ಅದನ್ನು ಹಾಡಲೇಬೇಕು ಎಂದು ಪೊಲೀಸರು ಹೇಳಿದ್ದಾರೆ.
ಸೋನು ನಿಗಮ್ ಅವರಿಗೆ ಕನ್ನಡ ಹಾಡು ಹೇಳುವಂತೆ ಕೆಲವರು ಕೇಳಿದ್ದರು. ಇದಕ್ಕೆ ನೋ ಎನ್ನುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದರು. ಸಾಕಷ್ಟು ಟೀಕೆಗಳ ಬಳಿಕ ಕೊನೆಗೂ ಸೊನು ನಿಗಮ್ ಕ್ಷಮೆ ಕೇಳಿದ್ದರು. ಈದೀಗ ಬೆಂಗಳೂರು ಗ್ರಾಮಾಂತರ ಎಸ್ಪಿಯಿಂದ ಖಡಕ್ ಸೂಚನೆ ಒಂದಿ ಬಂದಿದ್ದು, ಯಾರೇ ಕಾರ್ಯಕ್ರಮ ಮಾಡಿದರೂ ಪೊಲೀಸರ ಅನುಮತಿ ತೆಗೆದುಕೊಳ್ಳೂವುದು ಕಡ್ಡಾಯ ಎಂದು ಎಸ್ಪಿ ತಿಳಿಸಿದ್ದಾರೆ. ಕೇವಲ ಅನುಮತಿ ಪಡೆದರೆ ಮಾತ್ರ ಸಾಧ್ಯವಾಗುವುದಿಲ್ಲ ಅದರ ಜೊತೆಗೆ ಮಾರ್ಗಸೂಚಿ ನೀಡಲು ಪೊಲೀಸರು ಚಿಂತನೆ ನಡೆಸಿದ್ದಾರೆ.
ಪ್ರೇಕ್ಷಕರು ಕನ್ನಡ ಹಾಡು ಕೇಳಿದರೆ ಯಾವುದೇ ಗಾಯಕರು ಇದ್ದರೂ ಅದನ್ನು ಹಾಡಲೇಬೇಕು. ಅನಗತ್ಯವಾಗಿ ಪ್ರೇಕ್ಷಕರ ಜೊತೆ ಕಿರಿಕ್ ಮಾಡುವಂತಿಲ್ಲ’ ಎಂದು ಪೊಲೀಸರು ಸೂಚಿಸಿದ್ದಾರೆ. ಇನ್ನು, ಜಾತಿ, ದೇಶ, ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡುವಂತಿಲ್ಲ. ಅನುಮತಿ ಪಡೆಯುವ ವೇಳೆ ಮಾರ್ಗಸೂಚಿ ಪಾಲಿಸಲು ಪೊಲೀಸರ ಸೂಚನೆ ನೀಡಿದ್ದಾರೆ. ಮಾರ್ಗಸೂಚಿ ಒಪ್ಪದೇ ಇದ್ದರೆ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ ಮಾಡಲಾಗುತ್ತದೆ ಎಂದಿದ್ದಾರೆ.