‌ಡಿವೋರ್ಸ್‌ ಬಳಿಕ ನಟ ರಾಜ್‌ ಕುಮಾರ್ ರಾವ್ ತೋಳಿನಲ್ಲಿ ಯಜುವೇಂದರ್ ಚಾಹಲ್ ಮಾಜಿ ಪತ್ನಿ ಧನಶ್ರೀ

0
Spread the love

ರಾಜ್‌ಕುಮಾರ್ ರಾವ್ ನಟನೆಯ ಭೂಲ್ ಚುಕ್ ಮಾಫ್ ಚಿತ್ರದ ‘ ಟಿಂಗ್ ಲಿಂಗ್ ಸಜ್ನಾ’  ಹಾಡು ಇತ್ತೀಚೆಗೆ ಬಿಡುಗಡೆ ಆಗಿದ್ದು ಈ ಹಾಡಿನಲ್ಲಿ ಯುಜ್ವೇಂದ್ರ ಚಾಹಲ್‌ ಮಾಜಿ ಪತ್ನಿ ಧನಶ್ರೀ ಕಾಣಿಸಿಕೊಂಡು ಸದ್ದು ಮಾಡ್ತಿದ್ದಾರೆ. ವಿಚ್ಚೇದನದ ನಂತರ ಧನಶ್ರೀ ಸಖತ್‌ ಗ್ಲಾಮರ್‌ ಆಗಿ ಕಾಣಿಸಿಕೊಂಡಿದ್ದು ಇದೀಗ ಇದು ಸಾಕಷ್ಟು ಟ್ರೊಲ್‌ ಗೆ ಕಾರಣವಾಗಿದೆ.

Advertisement

ಮೇ 6 ರಂದು, ಭೂಲ್ ಚುಕ್ ಮಾಫ್ ಚಿತ್ರದ ನಿರ್ಮಾಪಕರು ಚಿತ್ರದ ನಾಲ್ಕನೇ ಹಾಡು ಟಿಂಗ್ ಲಿಂಗ್ ಸಜ್ನಾವನ್ನು ಬಿಡುಗಡೆ ಮಾಡಲಾಗಿದೆ. ಈ ವೀಡಿಯೊ ರಾಜ್‌ಕುಮಾರ್ ರಾವ್ ಪಾತ್ರ, ಬ್ಯಾಚುಲರ್ ಪಾರ್ಟಿಗೆ ಆಗಮಿಸುವುದರೊಂದಿಗೆ ಪ್ರಾರಂಭವಾಗುತ್ತದೆ

ಧನಶ್ರೀ ವರ್ಮಾ ಈ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಂಪು ಸೀಕ್ವಿನ್ಡ್ ತೋಳಿಲ್ಲದ ಬ್ಲೌಸ್ ಮತ್ತು ಹೈ-ಸ್ಲಿಟ್ ಚೋಲಿಯನ್ನು ಧರಿಸಿದ್ದರು.ಒಟ್ಟಾರೆ ಸಖತ್‌ ಬೋಲ್ಡ್‌ ಆಗಿ ಡ್ಯಾನ್ಸ್‌ ಮಾಡಿದ್ದಾರೆ. ವಿಚ್ಛೇದನದ ನಂತರ ಧನಶ್ರೀ ನಟನೆಯ ಮೊದಲ ಚಲನಚಿತ್ರ ಹಾಡಾಗಿದ್ದು ಈ ಹಾಡಿನಲ್ಲಿ ಧನಶ್ರೀ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಡಿವೋರ್ಸ್‌ ಬಳಿಕ ಧನಶ್ರೀ ಮತ್ತಷ್ಟು ಹಾಟ್‌ ಆಗಿರೋದು ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಯುಜುವೇಂದ್ರ ಹಾಗೂ ಧನಶ್ರೀ ಮದುವೆಯಾದ ನಾಲ್ಕು ವರ್ಷಗಳ ನಂತರ ವಿಚ್ಚೇದನ ಪಡೆದುಕೊಂಡಿದ್ದರು. ಡಿವೋರ್ಸ್‌ ಬಳಿಕ ಧನಶ್ರೀ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್‌ ಆಗಿದ್ದಾರೆ. ಭೂಲ್​ಚುಕ್ ಮಾಫ್’ ಸಿನಿಮಾದ ಬಳಿಕ ತೆಲುಗಿನ ಮತ್ತೊಂದು ಸಿನಿಮಾದಲ್ಲಿ ನಟಿಸಲು ಧನಶ್ರೀ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here