ವಿಜಯಸಾಕ್ಷಿ ಸುದ್ದಿ, ಗದಗ: ಪಹಲ್ಗಾಮ್ ಭಯೋತ್ಪಾದಕರ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರ ಮತ್ತು ಸೇನೆ ಉಗ್ರರ ಅಡಗುದಾಣಗಳ ಮೇಲೆ ನಡೆಸಿದ ಪ್ರತೀಕಾರದ ದಾಳಿ ಸ್ವಾಗತಾರ್ಹ ಎಂದು ಕೆಪಿಸಿಸಿ ಸದಸ್ಯ ಆನಂದ ಸ್ವಾಮಿ ಗಡ್ಡದೇವರಮಠ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಏನೂ ಅರಿಯದ ಮುಗ್ಧ 26 ಜನ ಭಾರತೀಯರ ಹತ್ಯೆ ಮಾಡಿದ್ದಲ್ಲದೇ ಪದೇ ಪದೇ ಭಾರತದ ಮೇಲೆ ದಾಳಿ, ಕುತಂತ್ರ ಮಾಡಿ ಭಾರತೀಯರ ಸಹನೆ, ಸ್ವಾಭಿಮಾನ ಕೆಣಕುತ್ತಿರುವ ಪಾಕಿಸ್ತಾನದ ಉಗ್ರರ ಅಟ್ಟಹಾಸ ಮಟ್ಟ ಹಾಕುವ ದಿಟ್ಟ ನಿರ್ಧಾರ ಖುಷಿ ತಂದಿದೆ. ಭಾರತದ ಸೇನೆಯ ಮೇಲೆ ಅಪಾರ ಗೌರವ, ವಿಶ್ವಾಸವಿದ್ದು, ಭಾರತ ಮಾತೆಯ ಮಕ್ಕಳಾದ ನಾವೆಲ್ಲ ನಮ್ಮೊಳಗಿನ ಬೇಧಭಾವ ಬದಿಗೊತ್ತಿ ದೇಶದ ರಕ್ಷಣೆಗೆ ಕಂಕಣಬದ್ಧರಾಗೋಣ ಎಂದಿದ್ದಾರೆ.



