ಬೆಂಗಳೂರು: ಆರ್ಥಿಕ ಸುರಕ್ಷತೆಯ ವಿಷಯದಲ್ಲೂ ಚಿನ್ನದ ಎತ್ತಿದ ಕೈ ಎನ್ನಬಹುದು. ಒಬ್ಬ ವ್ಯಕ್ತಿಯಿಂದ ಹಿಡಿದು ರಾಷ್ಟ್ರದ ಆರ್ಥಿಕ ಸದೃಢತೆಯಲ್ಲೂ ಚಿನ್ನ ಮಹತ್ವದ ಪಾತ್ರವಹಿಸಿದೆ. ಆರ್ಥಿಕವಾಗಿ ತಲೆದೋರುವ ಕಷ್ಟಕಾಲದ ಆಪದ್ಬಾಂಧವನಂತೆ ಚಿನ್ನ ಕಾರ್ಯ ನಿರ್ವಹಿಸುತ್ತದೆ.
ಇನ್ನು, ಚಿನ್ನದ ಬೆಲೆ ಯಾವಾಗಲೂ ಒಂದೇ ತೆರನಾಗಿರುವುದಿಲ್ಲ. ಹಲವಾರು ಜಾಗತಿಕ ವಿದ್ಯಮಾನಗಳು ಹಾಗೂ ಸ್ಥಳೀಯ ಕಾರಣಗಳಿಂದಾಗಿ ನಿತ್ಯ ಅದರ ಬೆಲೆ ಪ್ರಭಾವಿಸಲ್ಪಡುತ್ತಲೇ ಇರುತ್ತದೆ. ಹಾಗಾಗಿ ನಿತ್ಯದ ಬೆಲೆಯ ಅಪ್ಡೇಟ್ ಸಾಕಷ್ಟು ಜನರಿಗೆ ಉಪಯುಕ್ತ ಎನ್ನಬಹುದು.
ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಭಾರಿ ಹೆಚ್ಚಳ ಆಗಿದೆ. 1 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು ಬೋಬ್ಬರಿ 55 ರೂ ಹೆಚ್ಚಳ ಆಗಿದ್ದು, ಇಂದಿನ ಚಿನ್ನದ ದರ 22 ಕ್ಯಾರೆಟ್ 1 ಗ್ರಾಂ ಗೆ 9,130 ರೂ ಆಗಿದೆ, 24 ಕ್ಯಾರೆಟ್ 1 ಗ್ರಾಂ ಬೆಲೆ ಕೂಡಾ 60 ರೂ ಏರಿಕೆ ಆಗಿ, 9,960 ರೂ ಗೆ ಹೆಚ್ಚಳ ಆಗಿದೆ.
10 ಗ್ರಾಂ ಬೆಲೆ ಎಷ್ಟು?
22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ ಇಂದು ಒಂದೇ ದಿನ 550 ರೂ ಏರಿಕೆ ಆಗಿದೆ. ಇಂದಿನ ಬೆಲೆ 91,300 ರೂ ಆಗಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 600 ರೂ ಹೆಚ್ಚಳ ಆಗಿ, ಇಂದಿನ ಬೆಲೆ 99,600 ರೂ ಆಗಿದೆ.
ಬೆಂಗಳೂರಿನ ಚಿನ್ನದ ಬೆಲೆ
ಬೆಂಗಳೂರಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 9,130 ರೂ ಇದೆ. ಬೆಳ್ಳಿಯ ಬೆಲೆ 10 ಪೈಸೆ ಏರಿಕೆ ಆಗಿ ರೂ, 99,100 ರೂ ಆಗಿದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 90,750 ರೂ
- ಚೆನ್ನೈ: 90,750 ರೂ
- ಮುಂಬೈ: 90,750 ರೂ
- ದೆಹಲಿ: 90,900 ರೂ
- ಕೋಲ್ಕತಾ: 90,750 ರೂ
- ಕೇರಳ: 90,750 ರೂ
- ಅಹ್ಮದಾಬಾದ್: 90,800 ರೂ
- ಜೈಪುರ್: 90,900 ರೂ
- ಲಕ್ನೋ: 90,900 ರೂ
- ಭುವನೇಶ್ವರ್: 90,750 ರೂ