ಪಾಕ್ ಪ್ರಧಾನಿ ನಿದ್ದೆಗೆಡಿಸಿದ ಭಾರತದ ಮಿಸೈಲ್‌: ಶೆಹಬಾಜ್‌ ಷರೀಷ್‌ ಮನೆ ಬಳಿ ಭಾರೀ ಸ್ಪೋಟ!

0
Spread the love

ಇಸ್ಲಾಮಾಬಾದ್:– ಇಸ್ಲಾಮಾಬಾದ್‌ನಲ್ಲಿರುವ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಷ್‌ ಮನೆ ಬಳಿ ಗುರುವಾರ ಭಾರತ ದಾಳಿ ಮಾಡಿದೆ. ಪ್ರಧಾನಿ ಮನೆಯಿಂದ ಕೇವಲ 20 ಕಿಲೋ ಮೀಟರ್‌ ಅಂತರದಲ್ಲಿ ದಾಳಿ ಮಾಡಲಾಗಿದೆ.

Advertisement

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಆಪರೇಷನ್ ಸಿಂಧೂರ್ ನಂತರ ಹೆಚ್ಚಿದ ಉದ್ವಿಗ್ನತೆಯ ನಡುವೆ ಈ ಸ್ಫೋಟಗಳು ಸಂಭವಿಸಿವೆ. ಏತನ್ಮಧ್ಯೆ, ಶೆಹಬಾಜ್ ಷರೀಫ್ ಬಂಕರ್‌ನಲ್ಲಿ ಅಡಗಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಪಾಕಿಸ್ತಾನ ಸರ್ಕಾರ ಸ್ಫೋಟಗಳ ಮೂಲವನ್ನು ದೃಢಪಡಿಸಿಲ್ಲ. ಆದಾಗ್ಯೂ, ಭಾರತದ ಇತ್ತೀಚಿನ ವೈಮಾನಿಕ ದಾಳಿಗಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರಧಾನಿ ಷರೀಫ್ ಪ್ರತಿಜ್ಞೆ ಮಾಡಿದ ಸ್ವಲ್ಪ ಸಮಯದ ನಂತರ ಈ ಘಟನೆ ನಡೆದಿದೆ. ಅವುಗಳನ್ನು ಹೇಡಿತನದ ಕೃತ್ಯಗಳು ಎಂದು ಹಣೆಪಟ್ಟಿ ಕಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here