ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಭೌದ್ಧಿಕತೆ ಜೊತೆಗೆ ಶ್ರಮದಾನ ಕೂಡ ಬಹಳ ಮುಖ್ಯ ಎಂದು ಸಾಹಿತಿ ಪ್ರೊ. ಅಲ್ಲಮ ಪ್ರಭು ಬೆಟ್ಟದೂರು ಹೇಳಿದರು.
ತಾಲೂಕಿನ ಲೇಬಗೇರಿ ಗ್ರಾಮದಲ್ಲಿ ಕೊಪ್ಪಳದ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಸಿ ಅವರು ಮಾತನಾಡಿದರು.
ಶ್ರಮ ಜೀವನದ ಬೆಲೆ ತಿಳಿದುಕೊಳ್ಳಬೇಕು. ಎಲ್ಲರೂ ಶ್ರಮಪಟ್ಟರೆ ದೇಹಕ್ಕೆ ಒಳ್ಳೆಯದು. ಶ್ರಮ ಜೀವನದಿಂದ ನಾವು ಏನನ್ನೂ ಕಳೆದುಕೊಳ್ಳುವುದಿಲ್ಲ. ನಮ್ಮ ದೇಶದಲ್ಲಿ ವಿವಿಧತೆಯಿದೆ. ವಿವಿಧ ಆಹಾರ ಪದ್ಧತಿ, ವಿವಿಧ ಸಂಸ್ಕೃತಿ, ವಿವಿಧ ಭಾಷೆ ಇದೆ. ಕನ್ನಡ ಸಾಹಿತ್ಯದಲ್ಲಿ ಪ್ರಾಚಿನ ಕಾಲದಿಂದ, ಕವಿರಾಜ ಮಾರ್ಗದಿಂದ ಪಂಪ, ರನ್ನ, ಲಕ್ಷ್ಮೀಶ, ಚಾಮರಸ ಇವರೆಲ್ಲರೂ ನಮ್ಮ ಉತ್ತರ ಕರ್ನಾಟಕದವರು. ಗಂಡುಗಲಿ ಕುಮಾರ ರಾಮ ನಮ್ಮ ಭಾಗದವರು. ಈ ಭಾಗಕ್ಕೆ ಒಳ್ಳೆಯ ಸಂಸ್ಕೃತಿಯ ಶ್ರೀಮಂತಿಕೆಯಿದೆ.
ಮಾತನಾಡುವ ಭಾಷೆ ಮತ್ತು ಗ್ರಾಮೀಣ ಭಾಷೆಗೆ ವ್ಯತ್ಯಾಸವಿದೆ. ನಮ್ಮ ಭಾಗದ ಅನುಭವ ಮಂಟಪ ಇಂದಿನ ಸಂಸತ್ತಿನ ಪ್ರತೀಕವಾಗಿದೆ. ನಮ್ಮ ಹಳ್ಳಿಗಳ ಸ್ಥಿತಿ ಬಹಳ ಕಷ್ಟವಿದೆ. ಜನಪ್ರತಿನಿದಿಗಳು ಮನಸ್ಸು ಮಾಡಿದರೆ ಮತ್ತು ಇಚ್ಛಾಶಕ್ತಿ ಇದ್ದರೆ ಒಳ್ಳೆಯ ಕೆಲಸ ಮಾಡಬಹುದು. ನಾವು ಜನರ ಜೊತೆ ಬೇರೆಯಬೇಕು. ಜನರು ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲರೂ ಸರಳ ಜೀವನ ನಡೆಸಬೇಕು ಎಂದರು.
ಲೇಬಗೇರಿ ಗ್ರಾ.ಪಂ ಸದಸ್ಯ ಫಾಕಿರಗೌಡ ಮಾತನಾಡುತ್ತ, ವಿದ್ಯಾರ್ಥಿಗಳಾದ ನೀವು ನಿಮ್ಮ ತಂದೆ-ತಾಯಿಗಳ ಕಷ್ಟಗಳನ್ನು ಅರ್ಥ ಮಾಡಿಕೊಂಡು ಓದಬೇಕು. ನೀವು ದಿಟ್ಟ ಮಹಿಳೆಯರಾಗಬೇಕು. ಪ್ರತಿಯೊಬ್ಬರೂ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳನ್ನು ಇಟ್ಟುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಮಾತನಾಡುತ್ತ, ಗ್ರಾಮಗಳಲ್ಲಿ ಎನ್.ಎಸ್.ಎಸ್ ಶಿಬಿರಗಳ ಮೂಲಕ ಜನರಲ್ಲಿ ಸ್ವಚ್ಛತೆಯ ಅರಿವು ಬರುತ್ತದೆ. ಇಂತಹ ಶಿಬಿರಗಳ ಮೂಲಕ ಪ್ರಾಯೋಗಿಕ ಜ್ಞಾನ ಪಡೆದುಕೊಳ್ಳಬೇಕು. ಸಹಕಾರದ ಮೂಲವೇ ಹಳ್ಳಿಗಳು. ಹಳ್ಳಿಗಳು ತಮಗೆ ಏನು ಬೇಕೋ ಅದನ್ನು ತಾವೇ ಪಡೆದುಕೊಳ್ಳುತ್ತವೆ ಎಂದರು.
ಹಂಪಮ್ಮ ಸ್ವಾಗತಿಸಿದರು. ವಿಜಯಲಕ್ಷ್ಮೀ ನಿರೂಪಿಸಿದರು.
ಶಿಕ್ಷಣ ತಜ್ಞ ಬಿ.ಜಿ. ಕರಿಗಾರ ಮಾತನಾಡಿ, ಸರಕಾರ ಬಹಳ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ. ಇದರ ಜೊತೆಗೆ ನಾವು ಕೂಡ ಕೈಜೋಡಿಸಬೇಕು. ಎಲ್ಲರೂ ಉನ್ನತ ಶಿಕ್ಷಣ ಪಡೆಯಬೇಕು. ಸ್ವಚ್ಛತೆಯ ಕುರಿತು ಜನರಿಗೆ ಅರಿವು ಮೂಡಿಸಬೇಕು ಎಂದರು.