ಭಾರತ ಸರ್ಕಾರಕ್ಕೆ ಸಂಪೂರ್ಣ ಬೆಂಬಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಮ್ಮು ಮತ್ತು ಕಾಶ್ಮೀರದಲ್ಲಿ ಅಮಾಯಕರ ಮೇಲೆ ನಡೆದ ಗುಂಡಿನ ದಾಳಿಗೆ ಪ್ರತೀಕಾರವಾಗಿ ಭಾರತ ಸರ್ಕಾರ ಕೈಗೊಂಡ ಕ್ರಮಕ್ಕೆ ಸಮಸ್ತ ಭಾರತೀಯರೆಲ್ಲರೂ ಹೆಮ್ಮೆ ಪಡುತ್ತಿದ್ದಾರೆ. ಇದರ ಪರಿಣಾಮ ಏನೇ ಆಗಿದ್ದರೂ ಭಾರತದ ಪ್ರತಿಯೊಬ್ಬ ಪ್ರಜೆ ಭಾರತ ಸರಕಾರ ಮತ್ತು ಸೈನಿಕರ ಜೊತೆ ನಿಲ್ಲುತ್ತಾರೆ ಎಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾದ ರಾಜ್ಯಾಧ್ಯಕ್ಷ ಮಹ್ಮದಶಫಿ ಎಸ್.ನಾಗರಕಟ್ಟಿ ಹೇಳಿದ್ದಾರೆ.

Advertisement

ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಉಗ್ರರು ಎಲ್ಲಿಯೇ ಅಡಗಿದ್ದರೂ ಅವರನ್ನು ಮಟ್ಟ ಹಾಕುವ ಸಾಮರ್ಥ್ಯ ನಮ್ಮ ದೇಶಕ್ಕೆ ಇದೆ ಎಂಬುದನ್ನು ಇಡೀ ಜಗತ್ತಿಗೆ ತೋರಿಸುವ ಸಮಯ ಬಂದಿದೆ. ಭಾರತದ ಸೈನಿಕರು ಈ ಸಾಮರ್ಥ್ಯವನ್ನು ಹೊಂದಿದ್ದಾರೆ. ಈಗಿನ ಯುದ್ಧದ ಸಂದರ್ಭದಲ್ಲಿ ಸಂಪೂರ್ಣ ಯುದ್ಧವಾದರೆ ಭಾರತ ಸರ್ಕಾರ ಮತ್ತು ಸೇನೆಯ ಜೊತೆ ಪ್ರತಿಯೊಬ್ಬ ಮುಸಲ್ಮಾನರು ನಿಲ್ಲುತ್ತಾರೆ ಎಂದರು.

ಪ್ರಸ್ತುತ ಸಮಯದಲ್ಲಿ ಸಮಸ್ತ ಭಾರತೀಯರೆಲ್ಲರೂ ಭಾರತದ ಸಾರ್ವಭೌಮತ್ವಕ್ಕಾಗಿ ಯಾವುದೇ ತ್ಯಾಗ ಮಾಡಲೂ ಸಿದ್ಧರಿದ್ದಾರೆ. ನಮ್ಮ ಶಾಂತಿಯ ತತ್ವವನ್ನು ಅವರು ಅಸಹಾಯಕತೆ ಎಂದು ತಿಳಿದುಕೊಂಡಿದ್ದರು. ಆದರೆ ಈಗ ನಮ್ಮ ಸೈನಿಕರು ಇಡೀ ವಿಶ್ವಕ್ಕೆ ನಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಭಾರತ ಸರಕಾರವು ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೆ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪ್ರೊ. ಚಾಂದಪಾಷಾ, ಎಂ.ಡಿ. ಜಾಫರ್ ಡಾಲಾಯತ, ತಯೈಬ ಅಥಣಿ, ರಹೀಂಸಾಬ್ ದೊಡ್ಡಮನಿ, ನಾಸಿರ್ ನರೇಗಲ್, ಮುನ್ನ ಕಲ್ಮನಿ, ಎಂ.ಐ. ಮುಲ್ಲಾ, ರಫೀಕ್ ಮುಲ್ಲಾನವರ, ಎಂ.ಎಂ. ಶಿರಹಟ್ಟಿ, ಯಾಸಿನ್ ಎ.ಮುಲ್ಲಾ, ಅಫ್ಜಲ್ ಮನಿಯಾರ, ಯಾಸಿನ್ ಮುಲ್ಲಾದರವೇಶ್, ಮೊಹಮ್ಮದ ಯೂಸುಫ್, ಯಾಸಿನ್ ಖವಾಸ್ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here