ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ವಿರಾಮ ಘೋಷಣೆಯಾಗಿದ್ದರೂ ಕೂಡ ಪಾಕಿಸ್ತಾನವು ಗಡಿಯಲ್ಲಿ ಗುಂಡಿನ ದಾಳಿಯನ್ನು ಮುಂದುವರೆಸಿದೆ. ಹೌದು ಕದನ ವಿರಾಮ ಘೋಷಣೆಯಾದ ಬಳಿಕ ಕೆಲವೇ ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಸರಣಿ ಡ್ರೋನ್ ದಾಳಿ ಮಾಡಿದೆ. ಇವುಗಳನ್ನು ಭಾರತೀಯ ವಾಯು ಪಡೆ ಹೊಡೆದುರುಳಿಸಿದೆ.
ಇದರಿಂದ ಸ್ಫೋಟ ಸದ್ದು ಮತ್ತೆ ಕೇಳಿದ್ದರಿಂದ ಜನರು ಆತಂಕಕ್ಕೀಡಾಗಿದ್ದಾರೆ.ಶ್ರೀನಗರದಲ್ಲಿ ಸಂಜೆಯ ನಂತರ ಹಲವು ಸ್ಫೋಟಗಳಾಗಿವೆ. ವಾಯು ರಕ್ಷಣಾ ಪಡೆಗಳು ಪಾಕ್ ಡ್ರೋನಗಳನ್ನು ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ದೃಢಪಡಿಸಿದರು.
ಕಾಶ್ಮೀರ ಕಣಿವೆಯಾದ್ಯಂತ ಡ್ರೋನ್ ಚಟುವಟಿಕೆ ವರದಿಯಾಗಿದೆ. ರಾತ್ರಿ 8.20 ರ ಸುಮಾರಿಗೆ ಉತ್ತರ ಕಾಶ್ಮೀರದ ಬಾರಾಮುಲ್ಲಾ ಪಟ್ಟಣದಲ್ಲಿ ಮತ್ತು ಸೇನಾ ನೆಲೆಯ ಸಮೀಪದಲ್ಲಿರುವ ಅನಂತ್‌ನಾಗ್ ಎತ್ತರದ ಪ್ರದೇಶದಲ್ಲಿ ಡ್ರೋನ್ ಹೊಡೆದುರುಳಿಸಲಾಗಿದೆ ಎಂದು ವರದಿಯಾಗಿದೆ.



