Vikram Gaikwad: ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ಮೇಕಪ್ ಕಲಾವಿದ ಇನ್ನಿಲ್ಲ..!

0
Spread the love

ಮೇಕಪ್ ಮೂಲಕ ಚಿತ್ರರಂಗದಲ್ಲಿ ಮೋಡಿ ಮಾಡಿದ್ದ ಕಲಾವಿದ ವಿಕ್ರಮ್ ಗಾಯಕ್​ವಾಡ್​ ಅವರು ವಿಧಿವಶರಾಗಿದ್ದಾರೆ. ಸಂಜು, ಪಿಕೆ, ದಂಗಲ್, ರಂಗ್​ ದೆ ಬಸಂತಿ ಮುಂತಾದ ಸೂಪರ್ ಹಿಟ್ ಬಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ವಿಕ್ರಮ್ ಗಾಯಕ್​ವಾಡ್ ಅಗಲಿಕೆಯಿಂದ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಗಿದೆ.

Advertisement

ವಿಕ್ರಮ್ ಗಾಯಕ್​ವಾಡ್ ನಿಧನದ ಸುದ್ದಿಯನ್ನು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಖಚಿತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಹಲವು ವರ್ಷಗಳಿಂದ ವಿಕ್ರಮ್ ಗಾಯಕ್​ವಾಡ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಬಹುಬೇಡಿಕೆಯ ಮೇಕಪ್ ಕಲಾವಿದನಾಗಿ ಅವರು ಗುರುತಿಸಿಕೊಂಡಿದ್ದರು.

ಬ್ಲ್ಯಾಕ್ ಮೇಲ್, ಸೂಪರ್ 30, ಬೆಲ್ ಬಾಟಂ, ಥಗ್ಸ್ ಆಫ್ ಹಿಂದುಸ್ತಾನ್, 3 ಈಡಿಯಟ್ಸ್, ದಿಲ್ಲಿ 6, ಭಾಗ್ ಮಿಲ್ಕಾ ಭಾಗ್, ಓಂಕಾರ, ಕಮೀನೆ, ಕೇದಾರ್ನಾಥ್ ಸೇರಿದಂತೆ ಹಲವು ಸಿನಿಮಾಗಳಿಗೆ ವಿಕ್ರಮ್ ಗಾಯಕ್​ವಾಡ್ ಅವರು ಕೆಲಸ ಮಾಡಿದ್ದರು. ಅವರ ನಿಧನಕ್ಕೆ ಹಲವು ಸೆಲೆಬ್ರಿಟಿಗಳ ಕಂಬನಿ ಮಿಡಿಯುತ್ತಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ.


Spread the love

LEAVE A REPLY

Please enter your comment!
Please enter your name here