ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ರಂಜಿತ್ ಕುಮಾರ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು, ಇಂದು ಪ್ರೀತಿಸಿದ ಹುಡುಗಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದೊಡ್ಡಬಳ್ಳಾಪುರ ಸಿಂಗನಾಯಕನಹಳ್ಳಿನಲ್ಲಿ ನಟ ರಂಜಿತ್ ಕುಮಾರ್ ಹಾಗೂ ಮಾನಸ ಅವರ ಮದುವೆ ನಡೆದಿದೆ.
Advertisement
ಪ್ರೀತಿಸಿದ ಹುಡುಗಿ ಮಾನಸಾ ಅವರನ್ನೆ ರಂಜಿತ್ ಮದುವೆ ಆಗಿದ್ದಾರೆ. ಡಿಸೈನರ್ ಆಗಿರೋ ಮಾನಸಾ ಮತ್ತು ರಂಜಿತ್ ಅವರ ಮದುವೆ ಜೋರಾಗಿಯೇ ನಡೆದಿದೆ. ಎಲ್ಲ ಶಾಸ್ತ್ರಗಳೊಂದಿಗೆ ದಾಂಪತ್ಯ ಜೀವನಕ್ಕೆ ಈ ಜೋಡಿ ಕಾಲಿಟ್ಟಿದೆ.
ಇನ್ನೂ ರಂಜಿತ್ ಕುಮಾರ್ ಹಾಗೂ ಮಾನಸಾ ಮದುವೆಗೆ ಬಿಗ್ಬಾಸ್ ಸ್ಪರ್ಧಿಗಳು ಆಗಮಿಸಿ ಶುಭ ಹಾರೈಸಿದ್ದಾರೆ. ತುಕಾಲಿ ಸಂತೋಷ್ ಹಾಗೂ ಮಾನಸಾ ಸಂತೋಷ್, ಲಾಯರ್ ಜಗದೀಶ್, ಗೋಲ್ಡ್ ಸುರೇಶ್, ಅನುಷಾ ರೈ, ಯಮುನಾ ಶ್ರೀನಿಧಿ ಆಗಮಿಸಿ ನವ ವಧು ವರರಿಗೆ ಶುಭ ಹಾರೈಸಿದ್ದಾರೆ.