ನವದೆಹಲಿ: ವೈರಿಗಳನ್ನು ಸೆದೆ ಬಡಿಯಲು ನಮ್ಮ ಎಲ್ಲಾ ಪಡೆಗಳು ಸಿದ್ದವಾಗಿದೆ ಎಂದು ವಾಯು ಸೇನೆಯ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಅವಧೇಶ್ ಕುಮಾರ್ ಭಾರ್ತಿ ಅವರು ಹೇಳಿದರು. ಭಾರತೀಯ ಸೇನೆಯ ಮೂರು ಪಡೆಯ ಅಂದರೆ, ವಾಯುಸೇನೆ, ನೌಕ ಪಡೆ ಹಾಗೂ ಭೂಸೇನೆ ಮುಖ್ಯಸ್ಥರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದು,
ಈ ವೇಳೆ ಮಾತನಾಡಿದ ಅವರು, ವೈರಿಗಳನ್ನು ಸೆದೆ ಬಡಿಯಲು ನಮ್ಮ ಎಲ್ಲಾ ಪಡೆಗಳು ಸಿದ್ದವಾಗಿದೆ ಎಂದ ಅವರು, ಪಾಕಿಸ್ತಾನದಿಂದ ಡ್ರೋನ್ ದಾಳಿಯನ್ನು ಸಂಪೂರ್ಣವಾಗಿ ನಾಶ ಮಾಡಿದ್ದೇವೆ; ಹಾಗಾಗಿ, ‘ನಮ್ಮ ಎಲ್ಲಾ ಮಿಲಿಟರಿ ನೆಲೆಗಳು ಮತ್ತು ವ್ಯವಸ್ಥೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಲೇ ಇರುತ್ತವೆ’ ಎಂದರು.
ನಮ್ಮ ಹೋರಾಟ ಭಯೋತ್ಪಾದಕರು ಮತ್ತು ಅವರ ಬೆಂಬಲಿತರೊಂದಿಗೆ ಮಾತ್ರವೇ ಹೊರತು ಪಾಕಿಸ್ತಾನ ಸೇನೆಯೊಂದಿಗೆ ಅಲ್ಲ” ಎಂದರು. ಆದರೆ, ಉಗ್ರ ಚಟುವಟಿಕೆಗಳ ವಿರುದ್ಧದ ಕಾರ್ಯಾಚರಣೆ ವೇಳೆ, ಪಾಕಿಸ್ತಾನ ಸೇನೆಯು ಮಧ್ಯಪ್ರವೇಶಿಸಿ ಭಯೋತ್ಪಾದಕರ ಪರವಾಗಿ ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ಪರಿಣಾಮವಾಗಿ, “ನಾವು, ಆಪರೇಷನ್ ಸಿಂದೂರ ನಡೆಸಬೇಕಾಯಿತು ಎಂದು ಹೇಳಿದರು.