ಬೆಂಗಳೂರು: ನಾವು ಇಲ್ಲಿಯವರೆಗೆ ಯಾವುದೇ ಮಧ್ಯಸ್ಥಿಕೆಗೆ ಅವಕಾಶ ಕೊಟ್ಟಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಅನ್ನುವುದಕ್ಕಿಂತ ಪಾಕಿಸ್ಥಾನಕ್ಕೆ ಆದ ಮುಖಭಂಗ ಮತ್ತು ನಮ್ಮ ಸೈನಿಕರ ಮೇಲುಗೈ ಗಮನಿಸಿ ಕೆಲವು ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ನಾವು ಇಲ್ಲಿಯವರೆಗೆ ಯಾವುದೇ ಮಧ್ಯಸ್ಥಿಕೆಗೆ ಅವಕಾಶ ಕೊಟ್ಟಿಲ್ಲ. ಇದನ್ನೂ ಪ್ರಧಾನಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ಡಿಜಿಎಂಒಗಳ ಸಭೆಯನ್ನು ಕರೆದಿದ್ದರು. ಆದರೆ ಈ ಸಭೆ ಸಂಜೆಗೆ ಮುಂದೂಡಿಕೆಯಾಗಿದೆ ಎಂದರು.
ಯುದ್ಧದ ಬಗ್ಗೆ ಜನರಲ್ಲಿ ಎರಡು ತರಹದ ಭಾವನೆಗಳಿವೆ. ಯುದ್ಧವಾಗಬೇಕು ಅನ್ನೋದು ಒಂದು ವರ್ಗದ ಭಾವನೆಯಾದರೆ, ಮತ್ತೊಂದೆಡೆ ನಮಗೆ ಆಗುವ ಪ್ರಾಣಿಹಾನಿಯಾಗುತ್ತದೆ. ನಮಗೆ ಶಕ್ತಿಯಿದೆ ಅಂತಾ ಇನ್ನೊಂದು ದೇಶದ ಮೇಲೆ ಗದಾಪ್ರಹಾರ ಮಾಡಿದ್ರೇ, ಇವತ್ತು ಉಕ್ರೇನ್, ರಷ್ಯಾದವರು ಒಂದು ವರ್ಷದಿಂದ ಯುದ್ಧ ಮಾಡಿ ಏನು ಸಾಧನೆ ಮಾಡ್ತಾ ಇದ್ದಾರೆ ಎಂಬುದು ಕೆಲವರ ಭಾವನೆಯಾಗಿದೆ ಎಂದು ವಿವರಿಸಿದರು.