ಮಂಡ್ಯ: ಡಿಕೆ ಶಿವಕುಮಾರ್ ರಾಜಕೀಯ ಹೇಳಿಕೆಗಳಿಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ರಾಜ್ಯದ ಉಪ ಮುಖ್ಯಮಂತ್ರಿಯಾಗಿ ರಾಜಕೀಯ ಹೇಳಿಕಗಳನ್ನು ನೀಡುವ ಅನಿವಾರ್ಯತೆ ಅವರಿಗಿದೆ,
ಅದಕ್ಕೆ ತಮ್ಮದೇನೂ ಅಭ್ಯಂತರವಿಲ್ಲ, ಅದರೆ 1994 ರಿಂದ ಇಲ್ಲಿಯವರೆಗೆ ಮೂರು ದಶಕಗಳ ಅವಧಿಯಲ್ಲಿ ರಾಮನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಏನು ಕಾಣಿಕೆ ನೀಡಿದ್ದಾರೆ ಅಂತ ಜನರಿಗೆ ಗೊತ್ತಿದೆ, ಹಾಗಾಗಿ ಶಿವಕುಮಾರ್ ಅವರ ಮಾತುಗಳಿಗೆ ಹೆಚ್ಚಿನ ಮಹತ್ವ ನೀಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು.
ಇನ್ನೂ ಜಿಲ್ಲೆಯಲ್ಲಿ ಜೆಡಿಎಸ್ ಸದೃಢವಾಗಿದೆ. ಹಾಗಾಗಿ ನಮ್ಮ ಬಗ್ಗೆ ಮಾತನಾಡದೇ ಇನ್ಯಾರನ್ನೋ ದೂರುತ್ತಾರೆ. ಯಾವ ಕಾಲಘಟ್ಟದಲ್ಲಿ ಯಾವ ನಿರ್ಧಾರ ಮಾಡ್ಬೇಕೋ ಜನರು ಮಾಡ್ತಾರೆ. ದೇವೇಗೌಡರು, ಕುಮಾರಣ್ಣ ಜಿಲ್ಲೆಗೆ ಕೆಲಸ ಮಾಡಿದ್ದಾರೆ. ಅದು ಜನರಿಗೂ ಸಹ ಗೊತ್ತಿದೆ. ಸರ್ಕಾರ ಇದೇ ಮಾತನಾಡ್ತಿದೆ, ಮಾತನಾಡಲಿ. ಇದೇ ರೀತಿ ಇರಲ್ಲ, ಕಾಲಚಕ್ರ ಉರುಳಲಿದೆ ಎಂದು ಹೇಳಿದರು.