ಡೆಂಗೀ ಕುರಿತು ಅರಿವು ಮೂಡಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಾರ್ಡುಗಳಲ್ಲಿ ಪೌರ ಕಾರ್ಮಿಕರು ತಮ್ಮ ದೈನಂದಿನ ಕಾರ್ಯಗಳಲ್ಲಿ ಟೈರ್‌ಗಳು, ಟೂಬ್, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದು, ಮಳೆಗಾಲದಲ್ಲಿ ನಿಂತ ನೀರುಗಳನ್ನು ಸರಾಗವಾಗಿ ಹರಿಯುವಂತೆ ಮಾಡುವುದು, ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಒಡೆದ ಬಕೆಟ್, ಡಬ್ಬಿಗಳು, ಕೊಡಗಳು ಇತ್ಯಾದಿ ಘನ ತ್ಯಾಜ್ಯ ವಸ್ತುಗಳನ್ನು ಗುಜರಿ ಅಂಗಡಿ ಮಾಲಿಕರಿಗೆ ಸೂಕ್ತ ಸ್ಥಳಗಳಲ್ಲಿ ಸ್ಥಳಾಂತರಗೊಳಿಸಲು ಸೂಚಿಸಬೇಕು ಎಂದು ಗದಗ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಹೆಚ್.ಎಲ್. ಗಿರಡ್ಡಿ ತಿಳಿಸಿದರು.

Advertisement

ಗದಗ-ಬೆಟಗೇರಿ ನಗರಸಭೆ ಪೌರ ಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಡೆಂಗೀ ಮತ್ತು ಸಾಂಕ್ರಾಮಿಕ ರೋಗಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಳೆಗಾಲದಲ್ಲಿ ಡೆಂಗೀ ಕುರಿತು ನಗರಸಭೆಯ ಕಸದ ವಾಹನದಲ್ಲಿ ಆಡಿಯೋ ಕ್ಲಿಪ್‌ಗಳಲ್ಲಿ ಸಾರ್ವಜನಿಕರಿಗೆ ಮನ ಮುಟ್ಟುವಂತೆ ಪ್ರಚುರಪಡಿಸಬೇಕು ಎಂದು ಸೂಚಿಸಿದರು.

ಅನ್ನಪೂರ್ಣ ಶೆಟ್ಟರ ಮಾತನಾಡುತ್ತಾ, ಈಡೀಸ್ ಸೊಳ್ಳೆಗಳು, ಮೊಟ್ಟೆಗಳು, sಸೂಕ್ತಾವ್ಯಸ್ಥೆಯಲ್ಲಿ ತಿಂಗಳಗಟ್ಟಲೆ ಇರುವ ಕುರಿತು ತಿಳಿಸಿ, ಬಕೆಟ್‌ಗಳಲ್ಲಿ ಸಂಗ್ರಹವಿರುವ ನೀರಿನಲ್ಲಿ ಈಡಿಸ್ ಸೊಳ್ಳೆಗಳು ಉತ್ಪತ್ತಿಯಾಗುತ್ತಿರುವ ಕುರಿತು ವಿವರಿಸಿ ಇವುಗಳ ನಿಯಂತ್ರಣಕ್ಕಾಗಿ ಟೈರ್‌ಗಳನ್ನು ಮಳೆ ನೀರು ಸಂಗ್ರಹವಾಗದAತಹ ಪ್ರದೇಶಗಲ್ಲಿ ವಿಲೇವಾರಿ ಮಾಡುವುದು, ಲಾರ್ವಾ ನಾಶಕ ಬಳಸುವುದು, ಪ್ಲಾಸ್ಟಿಕ್ ಹೋದಿಕೆಗಳಲ್ಲಿ ನೀರು ಶೇಖರಣೆಯಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಅಲ್ಲದೆ, ಕಾರ್ಮಿಕರಿಗೆ ಸೊಳ್ಳೆ ನಿರೋಧಕಗಳನ್ನು ಬಳಸುವುದು ಅವಶ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗದಗ-ಬೆಟಗೇರಿ ನಗರಸಭೆಯ ಆಯುಕ್ತರಾದ ರಾಜಾರಾಂ ಶಿವಾಜಿ ಪವಾರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ರೂಪಸೇನ ಚವ್ಹಾಣ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿಗಳು, ಪ್ರಾಥಮಿಕ ಸುರಕ್ಷಾಧಿಕಾರಿಗಳು, ಮಲೇರಿಯಾ ಲಿಂಕ್ ವರ್ಕರ್ಸ್ ಹಾಗೂ ಪೌರಕಾರ್ಮಿಕರು ಹಾಜರಿದ್ದರು.

ಆರೋಗ್ಯ ನಿರೀಕ್ಷಣಾಧಿಕಾರಿ ಇಬ್ರಾಹಿಂ ಮಕಾಂದಾರ ಸ್ವಾಗತಿಸಿದರು. ಹಿರಿಯ ವೈದ್ಯಕೀಯ ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ಈರಣ್ಣ ಎಸ್.ಚಲ್ಮಿ ನಿರೂಪಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಿಯಾಜ್ ಖಾ.ಘೂಡುನಾಯ್ಕರ ವಂದಿಸಿದರು.

ಜಿಲ್ಲೆಯ ಕೀಟಜನ್ಯ ಶಾಸ್ತ್ರಜ್ಞರಾದ ಅನ್ನಪೂರ್ಣ ಶೆಟ್ಟರ ಮಾತನಾಡುತ್ತಾ, ಈಡಿಸ್ ಸೊಳ್ಳೆಗಳ ಉತ್ಪತ್ತಿ ಹಾಗೂ ನಿಯಂತ್ರಣ ಕುರಿತು ವಿವರಿಸುತ್ತಾ, ಈಡಿಸ್ ಜಾತಿಯ ಸೊಳ್ಳೆಗಳು ವಿಶಿಷ್ಠ ಲಕ್ಷಣಗಳಾದ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುವವು, ಶುದ್ಧವಾದ ನೀರಿನಲ್ಲಿ ಮತ್ತು ನೀರು ಶೇಖರಣಾ ಪರಿಕರಗಳು ಘನ ತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ನೀರಿನಲ್ಲಿ ವಂಶಾಭಿವೃದ್ಧಿಯಾಗುವ ಕುರಿತು ವಿವರಿಸಿದರು.


Spread the love

LEAVE A REPLY

Please enter your comment!
Please enter your name here