ಶಿವಮೊಗ್ಗ: ಪ್ರಿಯಾಂಕ್ ಖರ್ಗೆ ವೃಥಾ ಟೀಕೆಗಳನ್ನು ಮಾಡದೆ ಸೇನೆ ಜೊತೆ ನಿಂತುಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು,
Advertisement
ಭಾರತ ಮತ್ತು ಪಾಕ್ ನಡುವೆ ಕದನವಿರಾಮ ಘೋಷಣೆಯಾದ ಮೇಲೆ ಪ್ರಿಯಾಂಕ್ ಖರ್ಗೆ ಅವರು ಭಾರತದ ಪ್ರಧಾನಿ ಮೋದಿ ಅವರು ಅಮೆರಿಕದ ಅಧ್ಯಕ್ಷರಿಗೆ ಶರಣಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಸರಿಯಲ್ಲ.
ನಿನ್ನೆ ಮೋದಿಯವರು ಕದನ ವಿರಾಮ ಉಲ್ಲಂಘಿಸಿ ಒಂದು ಗುಂಡು ಬಂದ್ರೂ ಸಹ ಅದು ಯುದ್ದಕ್ಕೆ ಆಹ್ವಾನ ಎಂದು ತಿಳಿಸಿದ್ದಾರೆ. ಪೆಹಲ್ಗಾಮ್ ಉಗ್ರರು ಎಲ್ಲಿದ್ದಾರೆಂಬ ಪ್ರಶ್ನೆಯನ್ನು ಪ್ರಿಯಾಂಕ್ ಖರ್ಗೆ ಮಾಡಿದ್ದಾರೆ. ಇಂತಹ ಸಮಯದಲ್ಲಿ ಈ ರೀತಿಯ ಮಾತುಗಳು ಸರಿಯಲ್ಲ. ನಮ್ಮ ಸಶಸ್ತ್ರ ಪಡೆಗಳು ತಯಾರಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ” ಎಂದರು.