ಫಲಾನುಭವಿಗಳನ್ನು ಗ್ಯಾರಂಟಿ ವ್ಯಾಪ್ತಿಗೆ ಸೇರಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ಪಂಚ ಗ್ಯಾರಂಟಿ ಯೋಜನೆಯಡಿಯಲ್ಲಿ ತಾಲೂಕಿನ ಯಾವುದೇ ವ್ಯಕ್ತಿ ಯೋಜನೆಯ ಲಾಭ ಪಡೆಯದೆ ಇದ್ದಲ್ಲಿ ಅಂಥವರನ್ನು ಗುರುತಿಸಿ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸರ್ವೆ ಕೈಗೊಂಡ ಸರ್ಕಾರದಿಂದ ಅನುಷ್ಠಾನಿತ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಮಿಥುನ ಪಾಟೀಲ ತಿಳಿಸಿದರು.

Advertisement

ಪಟ್ಟಣದ ತಾಲೂಕ ಪಂಚಾಯಿತಿಯ ಗ್ಯಾರಂಟಿ ಕಾರ್ಯಾಲಯದಲ್ಲಿ ಜರುಗಿದ ರೋಣ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ತಾಲೂಕಿನ ಪ್ರತಿ ಗ್ರಾಮದಲ್ಲಿಯೂ ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ವೆ ಮಾಡಲು ನೇಮಿಸಿ, ನೇಮಿಸಿದ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ಹೋಗಿ ಸರ್ವೆ ಮಾಡಿ ಸರ್ಕಾರದಿಂದ ಅನುಷ್ಠಾನಿತ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿರುವ ಬಗ್ಗೆ ಪರಿಶೀಲನೆ ಮಾಡಬೇಕು. ಗ್ಯಾರಂಟಿ ಯೋಜನೆಗಳು ಇನ್ನೂ ತಲುಪದಿದ್ದಲ್ಲಿ, ತಲುಪದೇ ಇರಲು ಕಾರಣವನ್ನು ಪರಿಶೀಲಿಸಿ, ಅದಕ್ಕೆ ಪರಿಹಾರವನ್ನು ಕಲ್ಪಿಸಿ ಅರ್ಹರಿಗೆ ಯೋಜನೆಗಳನ್ನು ತಲುಪಿಸಬೇಕು ಎಂದು ಹೇಳಿದರು.

ರೋಣ ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಯಡಿ 36857 ಅರ್ಜಿಗಳು ನೋಂದಣಿಯಾಗಿದ್ದು, ಅದರಲ್ಲಿ 36183 ಮಂಜೂರಾತಿ ಆಗಿದ್ದು, 674 ಮಂಜೂರಾತಿಗೆ ಬಾಕಿ ಉಳಿದಿವೆ. ಅವರನ್ನು ಗುರುತಿಸಿ ಅವರಿಗೆ ಗೃಹಲಕ್ಷ್ಮೀ ಯೋಜನೆಗೆ ಸೇರಿಸಿ ಶೇ. 98.17 ಪ್ರಗತಿ ಸಾಧಿಸಿದೆ. ಮುಖ್ಯವಾಗಿ 171 ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಮರಣ ಹೊಂದಿದ್ದು, ಸಂಬಂಧಿಸಿದ ಅಂಗನವಾಡಿ ಕಾರ್ಯಕರ್ತೆಯರು ಮರಣಪತ್ರ ಪಡೆದು, ಅವರ ಹೆಸರನ್ನು ಕಡಿಮೆ ಮಾಡಲು ಹೇಳಿದರು.

ಗೃಹಜ್ಯೋತಿ ಯೋಜನೆಯಡಿ ರೋಣ ಉಪವಿಭಾಗದಲ್ಲಿ ಒಟ್ಟು ಸಂಪರ್ಕ ಇದ್ದ ಸಂಖ್ಯೆ 43272 ಸ್ಥಾವರಗಳು. ಅದರಲ್ಲಿ 22268 ಫಲಾನುಭವಿಗಳು ಯೋಜನೆಯ ಲಾಭ ಪಡೆದಿದ್ದು, ಯೋಜನೆಯ ಲಾಭ ಪಡೆಯದ ಉಳಿದ 1380 ಸ್ಥಾವರಗಳ ಸರ್ವೆ ಮಾಡಿ ಎಂದರು.

ಯುವನಿಧಿ ಯೋಜನೆಯಡಿ ರೋಣ ತಾಲೂಕಿನಲ್ಲಿ 753 ಫಲಾನುಭವಿಗಳ ನೋಂದಣಿಯಾಗಿದ್ದು, 448 ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ 13,30,500 ರೂ. ವರ್ಗಾವಣೆಯಾಗಿದೆ ಎಂದು ಸಂಬAಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ, ಗ್ಯಾರಂಟಿ ಸಮಿತಿಯ ಸದಸ್ಯರು, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಿತ ಅಧಿಕಾರಿಗಳು ಸೇರಿದಂತೆ ತಾ.ಪಂ ಸಿಬ್ಬಂದಿಗಳು ಹಾಜರಿದ್ದರು.

ಅನ್ನಭಾಗ್ಯ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಆಹಾರ ಇಲಾಖೆಯ ಅಧಿಕಾರಿಗಳು ಪಡಿತರ ಅಂಗಡಿದಾರರ ಜೊತೆಗೆ ಸಭೆ ನಡೆಸಬೇಕು. ಅನ್ನಭಾಗ್ಯ ಅಕ್ಕಿಯು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಸದ್ಯ ರೇಶನ್ ಕಾರ್ಡ್ ಳ ನೋಂದಣಿ ಪ್ರಾರಂಭಿಸಿದ್ದು, ಅದರ ಕಾಲಾವಧಿಯನ್ನು ಜನರಿಗೆ ತಿಳಿಯುವಂತೆ ಜಾಗೃತಿ ವಹಿಸಬೇಕು ಎಂದು ಮಿಥುನ್ ಪಾಟೀಲ ಸೂಚಿಸಿದರು.


Spread the love

LEAVE A REPLY

Please enter your comment!
Please enter your name here