ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಮ್ಮನೆ ಯುವರಾಣಿ ಧಾರಾವಾಹಿ ಸಖತ್ ಖ್ಯಾತಿ ಘಳಿಸಿತ್ತು. ಈ ಧಾರವಾಹಿಯಲ್ಲಿ ಮೀರಾ ಪಾತ್ರದಲ್ಲಿ ನಟಿಸಿದ್ದ ನಟಿ ಅಂಕಿತಾ ಅಮರ್ ತನ್ನ ಪ್ರತಿಭೆಯ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರುವ ಭರವಸೆ ನೀಡಿದ್ದಾರೆ.
ಮೊದಲ ಧಾರಾವಾಹಿಯ ಮೂಲಕವೇ ಜನಪ್ರಿಯತೆ ಪಡೆದ ನಟಿ ಅಂಕಿತಾ ಅಮರ್ ಸಖತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ನಟಿಯ ಕೈಯಲ್ಲಿ ನಾಲ್ಕೈದು ಸಿನಿಮಾಗಳಿದ್ದು ಇದೀಗ ಮತ್ತೊಂದು ಭರ್ಜರಿ ಆಫರ್ ಸಿಕ್ಕಿದೆ.
ಕಳೆದ ವರ್ಷ ರಕ್ಷಿತ್ ಶೆಟ್ಟಿ ನಿರ್ಮಾಣದ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟಿದ್ದ ಅಂಕಿತಾ ಅಮರ್ ಇದೀಗ ರಿಯಲ್ ಸ್ಟಾರ್ ಉಪೇಂದ್ರಗೆ ನಾಯಕಿಯಾಗುವ ಮೂಲಕ ಮತ್ತೊಂದು ಭರ್ಜರಿ ಆಫರ್ ಪಡೆದುಕೊಂಡಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಹೊಸ ಸಿನಿಮಾ ಭಾರ್ಗವಕ್ಕೆ ನಾಯಕಿಯಾಗಿ ಅಂಕಿತಾ ಅಮರ್ ಆಯ್ಕೆಯಾಗಿದ್ದಾರೆ. ನಾಗಣ್ಣ ನಿರ್ದೇಶನ ಮಾಡುತ್ತಿರುವ ಭಾರ್ಗವ ಸಿನಿಮಾದಲ್ಲಿ ಉಪೇಂದ್ರಗೆ ಅಂಕಿತಾ ನಾಯಕಿಯಾಗಿದ್ದಾರೆ. ಇದು ನಾಗಣ್ಣ ಹಾಗೂ ಉಪೇಂದ್ರ ಕಾಂಬಿನೇಶನ್ ನ ಐದನೇ ಸಿನಿಮಾ ಆಗಿದೆ. ಇಬ್ಬನಿ ತಬ್ಬಿದ ಇಳಿಯಲಿ ಸಿನಿಮಾದಲ್ಲಿ ಅಂಕಿತಾ ಅಭಿನಯ ನೋಡಿ ಮೆಚ್ಚಿಕೊಂಡಿರುವ ಉಪೇಂದ್ರ, ಭಾರ್ಗವ ಸಿನಿಮಾದಲ್ಲಿ ನಟನೆಗೆ ಹೆಚ್ಚು ಸ್ಕೋಪ್ ಇರೋದರಿಂದ ನಾಯಕಿ ಪಾತ್ರಕ್ಕೆ ಅಂಕಿತಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.