ಬೆಂಗಳೂರು: ಗ್ರೇಟರ್ ಬೆಂಗಳೂರು ಡಿಕೆ ಶಿವಕುಮಾರ್ ಕಲ್ಪನೆಯ ಕೂಸು, ಬೆಂಗಳೂರಲ್ಲಿ ವಿನೂತನ ಪ್ರಯೋಗ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ನಗರದಲಲಿ ಮಾತನಾಡಿದ ಅವರು, ಇಂದಿನಿಂದ ಗ್ರೇಟರ್ ಬೆಂಗಳೂರು ಅಧಿನಿಯಮ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಕಲ್ಪನೆಯನ್ನು ಹುಟ್ಟುಹಾಕಿರುವ ಶಿವಕುಮಾರ್ಗೆ ಅಭಿನಂದನೆ ಸಲ್ಲಿಸಿದರು.
Advertisement
ಗ್ರೇಟರ್ ಬೆಂಗಳೂರು ಅಧಿನಿಯಮವು ಸರ್ಕಾರದ ಕಾರ್ಯಕ್ರಮ ಮತ್ತು ಯೋಜನೆಗಳ ಮೇಲೆ ಹೆಚ್ಚಿನ ಫೋಕಸ್ ಮಾಡಿ ಎಲ್ಲರಿಗೂ ತಲುಪಿಸಲು ನೆರವಾಗುತ್ತದೆ, ಬೆಂಗಳೂರಲ್ಲಿ ಇದು ವಿನೂತನ ಪ್ರಯೋಗ, ಇದರ ಸಫಲತೆ ಮತ್ತು ಪ್ರಸ್ತುತತೆಯ ಬಗ್ಗೆ ಈಗಲೇ ಕಾಮೆಂಟ್ ಮಾಡುವುದು ಸರಿಯಲ್ಲ ಎಂದು ಹೇಳಿದರು.