ವಿಜಯಸಾಕ್ಷಿ ಸುದ್ದಿ, ರೋಣ: ನವ ದಂಪತಿಗಳು ಸಮಾಜದಲ್ಲಿ ಸುಂದರ ಜೀವನವನ್ನು ನಿರ್ವಹಿಸಬೇಕು. ಅಂದಾಗ ಮಾತ್ರ ಕುಟುಂಬ ಸದೃಢತೆಯಿಂದ ಇರಲು ಸಾಧ್ಯ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ಗುರುವಾರ ಕೊತಬಾಳ ಗ್ರಾಮದ ಅಡವಿಸಿದ್ದೇಶ್ವರ ಶ್ರೀಮಠದ ಜಾತ್ರಾ ಮಹೋತ್ಸವದ ನಿಮಿತ್ತ ಜರುಗಿದ 18 ಜೋಡಿ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.
ನವ ದಂಪತಿಗಳು ತಂದೆ-ತಾಯಿಗಳ ಬಗ್ಗೆ ಪ್ರೀತಿಯನ್ನು ಹೊಂದಬೇಕು. ಜೊತೆಗೆ ಹಿರಿಯರನ್ನು ಗೌರವಿಸುತ್ತ, ಧಾರ್ಮಿಕ ಪದ್ಧತಿಯಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು. ತಮಗೆ ಜನಿಸುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಪ್ರಯತ್ನಿಸಬೇಕು. ಒಬ್ಬರಿಗೊಬ್ಬರು ಅರಿತುಕೊಂಡು ಸಹಬಾಳ್ವೆ ನಡೆಸಬೇಕು ಎಂದರು.
ಬಸವಲಿAಗ ಶ್ರೀಗಳು, ಬಸವಲಿಂಗೇಶ್ವರ ಶ್ರೀಗಳು, ಗುರುಪಾದ ಶ್ರೀಗಳು, ಸಿದ್ದಲಿಂಗ ಶ್ರೀಗಳು, ಒಪ್ಪತ್ತೇಶ್ವರ ಶ್ರೀಗಳು, ಮಹಾದೇವ ಶ್ರೀಗಳು, ಶಿವಪೂಜಾ ಶ್ರೀಗಳು, ಗುರು ಸಿದ್ದೇಶ್ವರ ಶ್ರೀಗಳು, ಕೈಲಾಸಲಿಂಗ ಶ್ರೀಗಳು, ವೀರೇಶ್ವರ ಶ್ರೀಗಳು, ಗಂಗಾಧರ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಿದ್ದರು.
ಬಸವರಾಜ ನಲಗುಂದ, ಮುತ್ತಣ್ಣ ಸಂಗಳದ, ಅಭಿಷೇಕ ನವಲಗುಂದ, ಡಾ. ಸಂಜಯ ರಡ್ಡೆರ, ತಾ.ಪಂ ಮಾಜಿ ಸದಸ್ಯ ಸಿದ್ದಣ್ಣ ಯಾಳಗಿ, ಗ್ರಾ.ಪಂ ಸದಸ್ಯ ವೀರಣ್ಣ ಯಾಳಗಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.