ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಮನೋರಮಾ ಕಾಲೇಜಿನಲ್ಲಿ ಬಿಬಿಎ ಹಾಗೂ ಬಿಕಾಂ ವಿದ್ಯಾರ್ಥಿಗಳಿಗೆ ಮಾರ್ಕೆಟಿಂಗ್ ಫೆಸ್ಟ್ ಏರ್ಪಡಿಸಲಾಗಿತ್ತು. ಪ್ರೊ. ಚೈತ್ರಾ ಡಿ ಅವರ ನೇತೃತ್ವದಲ್ಲಿ ಹತ್ತು ವಿದ್ಯಾರ್ಥಿಗಳ ಗುಂಪುನ್ನು ರಚಿಸಿ ಒಂದೊಂದು ಗುಂಪಿನ ವಿದ್ಯಾರ್ಥಿಗಳು ವ್ಯಾಪರ ವಹಿವಾಟು ಮಾಡಲು ಅಂಗಡಿಗಳನ್ನು ಹಾಕಿ, ವ್ಯವಹಾರ ಜ್ಞಾನ ಬೆಳಸಿಕೊಂಡರು.
ನಿರ್ಣಾಯಕರಾಗಿ ಪ್ರೊ. ರಾಘವೇಂದ್ರ ಮೊದಕ ಹಾಗೂ ರಮ್ಯಾ ಜೋಶಿ ಆಗಮಿಸಿ ವಿದ್ಯಾರ್ಥಿಗಳ ಕಾರ್ಯವೈಖರಿಗೆ ಮನಸೋತು ಬದುಕಿನಲ್ಲಿ ಕಷ್ಟ-ಸುಖ ಸಮನಾಗಿ ಸ್ವೀಕರಿಸುವ ಮನೋಭಾವ ಹೊಂದಿ. ವ್ಯಾಪಾರದಲ್ಲಿ ಲಾಭ-ನಷ್ಟ ಸಹಜವಾಗಿದ್ದು, ಆತ್ಮಸ್ಥೈರ್ಯದಿಂದ ಬದುಕು ಸಾಗಿಸಿ ಎಂದರು.
ಸಂಸ್ಥೆಯ ಚೇರಮನ್ ಎನ್.ಎಮ್. ಕುಡತರಕರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಬಿ.ಎಸ್. ಹೀರೆಮಠ ಮಾತನಾಡಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಕುಡತರಕರ, ಸಂಜಯ ಕುಡತರಕರ, ಚೇತನ ಕುಡತರಕರ, ಸಂಯೋಜಕರಾದ ಪ್ರೊ. ಚೈತ್ರಾ ಡಿ, ಪ್ರೊ. ಅಲ್ವೀನಾ ಡಿ, ಪ್ರೊ. ಸವಿತಾ ಪೂಜಾರ, ಪ್ರೊ. ಶಾಹೀದಾ ಶಿರಹಟ್ಟಿ ಸೇರಿದಂತೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.