ಬೆಂಗಳೂರು: ಭಯೋತ್ಪಾದನೆ ಬೆಳೆಸುವ ಕೇಂದ್ರಗಳಿಗೆ ನೀರು ಗೊಬ್ಬರ ಹಾಕಿ ಕಾಂಗ್ರೆಸ್ʼನವರು ಪೋಷಿಸುತ್ತಿದ್ದಾರೆ ಎಂದು ಪರಿಷತ್ ಸದಸ್ಯ ಸಿ.ಟಿ ರವಿ ಆರೋಪಿಸಿದರು. ನಗರದಲ್ಲಿ ಮಾತನಾಡಿದ ಅವರು,
Advertisement
ಭಯೋತ್ಪಾದನೆ ಬೆಳೆಸುವ ಕೇಂದ್ರಗಳಿಗೆ ನೀರು ಗೊಬ್ಬರ ಹಾಕಿ ಕಾಂಗ್ರೆಸ್‌ನವರು ಪೋಷಿಸುತ್ತಿದ್ದಾರೆ. ಕಾಂಗ್ರೆಸ್‌ನವರ ಮನಸ್ಥಿತಿ ಬದಲಾಗಬೇಕು. ಭಯೋತ್ಪಾದನೆಯೆ ಡಿಎನ್‌ಎ ಕಿತ್ತು ಹಾಕಿ ಮೊದಲು. ಆ ಡಿಎನ್‌ಎ ಕರ್ನಾಟಕದಲ್ಲೂ ಇದೆ, ಜಗತ್ತಲ್ಲೂ ಇದೆ. ಮೊದಲು ಇದನ್ನ ಮಟ್ಟ ಹಾಕಬೇಕು ಎಂದು ಗುಡುಗಿದರು.
ಭಯೋತ್ಪಾದನೆ ಮೂಲಕ್ಕೆ 1400 ವರ್ಷಗಳ ಇತಿಹಾಸ ಇದೆ. ಬದಲಾದ ಸಂದರ್ಭ, ಬದಲಾದ ರೀತಿಯಲ್ಲಿ ಅದು ನಡೀತಿದೆ. ಕರ್ನಾಟಕದಲ್ಲೂ ಭಯೋತ್ಪಾದಕರ ಕೇಂದ್ರಗಳಿವೆ. ಮತದ ಹೆಸರಲ್ಲಿ ಅಲ್ಲಿ ಏನು ಕಲಿಸ್ತಿದ್ದಾರೆ? ಅದಕ್ಕೆ ಯಾರ ಪೋಷಣೆ ಇದೆ? ನಮ್ಮ ಪೋಷಣೆ ಪ್ರಶಂಸೆ ಸೇನೆಗೆ ಅಂತಾ ಕಾಂಗ್ರೆಸ್‌ನವರು ಹೇಳಿದ್ರು. ಹಾಗಾದ್ರೆ ಟೀಕೆ ಯಾರಿಗೆ ಎಂದು ಪ್ರಶ್ನಿಸಿದರು.