ವಿಜಯಸಾಕ್ಷಿ ಸುದ್ದಿ, ರಾಯ್ ಪುರ
ಲಾಕ್ ಡೌನ್ ಸಂದರ್ಭದಲ್ಲಿ ನಿಯಮ ಉಲ್ಲಂಘನೆ ಮಾಡಿದ ಯುವಕನಿಗೆ ಥಳಿಸಿದ್ದ ಸೂರಜ್ ಪುರ ಜಿಲ್ಲಾಧಿಕಾರಿ ಅಮಾನತು ಮಾಡಲು ಚತ್ತೀಸ್ ಗಢ ಸಿಎಂ ಭೂಪೇಶ್ ಭಗೇಲ್ ಆದೇಶ ನೀಡಿದ್ದಾರೆ.
ಅಧಿಕಾರಿಗಳು ಯುವಕನಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಸಾರ್ವಜನಿಕರಿಂದ ತೀವ್ರ ಟೀಕೆ ಎದುರಾಗಿತ್ತು.

ಕೊರೊನಾ ತಡೆಗೆ ಲಾಕ್ ಡೌನ್ ವಿಧಿಸಿರುವ ನಡುವೆಯೂ ಯುವಕನೊಬ್ಬ ಸಂಚರಿಸುತ್ತಿದ್ದ, ಇದನ್ನು ಅಧಿಕಾರಿಗಳು ಕಂಡೊಡನೆಯೇ ಆತ ತಾನು ಸಂಚರಿಸುತ್ತಿದ್ದದ್ದಕ್ಕೆ ಕಾರಣ ನೀಡಲು ಯತ್ನಿಸಿದ್ದ. ಆದರೆ, ಜಿಲ್ಲಾಧಿಕಾರಿ ಮಾತ್ರ ದರ್ಪ ಮೆರೆದಿದ್ದರು. ಮೊಬೈಲ್ ಹಾಗೂ ಯುವಕ ನೀಡುತ್ತಿದ್ದ ಕಾಗದವನ್ನು ಎಸೆದು ಕಾರಾಣ ಆಲಿಸದೆ ಅಧಿಕಾರಿಗಳು ಯುವಕನನ್ನು ಥಳಿಸಿದ್ದರು.
ಯುವಕನನ್ನು ಥಳಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿ ಜಿಲ್ಲಾಧಿಕಾರಿಗಳನ್ನು ತೆಗೆದು ಹಾಕುವಂತೆ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

