ಕೊಪ್ಪಳ:- ಕೊಪ್ಪಳದ ಕನಕಗಿರಿ ಪಟ್ಟಣದಲ್ಲಿ ಕೇವಲ 100 ರೂ. ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಮೊಮ್ಮಗನೋರ್ವ ಅಜ್ಜಿಯನ್ನೇ ಕೊಲೆ ಮಾಡಿರುವ ಘಟನೆ ಜರುಗಿದೆ. 82 ವರ್ಷದ ಕನಕಮ್ಮ ನಾಗಪ್ಪ ಬೊಕ್ಕಸದ ಕೊಲೆಯಾದ ವೃದ್ಧೆ. ಚೇತನ್ ಕುಮಾರ್ ಅಜ್ಜಿಯನ್ನೇ ಕೊಲೆಗೈದ ಮೊಮ್ಮಗ.
Advertisement
ಚೇತನ್ ಹಣ ನೀಡುವಂತೆ ತಂದೆ, ತಾಯಿ ಹಾಗೂ ಅಜ್ಜಿಯನ್ನು ಪ್ರತಿದಿನ ಪೀಡಿಸುತ್ತಿದ್ದ. ಅಜ್ಜಿ ಕನಕಮ್ಮನ ಕೈಕಾಲು ಹಿಡಿದಿದ್ದ. ಆದರೂ ಕನಕಮ್ಮ ಹಣ ಕೊಟ್ಟಿರಲಿಲ್ಲ. ಇದರಿಂದ ಕೋಪಗೊಂಡ ಚೇತನ್ ಅಜ್ಜಿ ಕನಕಮ್ಮನ ತಲೆಯ ಮೇಲೆ ರುಬ್ಬುವ ಕಲ್ಲು ಎತ್ತಿಹಾಕಿದ್ದ. ಕನಕಮ್ಮಳ ತಲೆಯ ಭಾಗಕ್ಕೆ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವದಿಂದ ಮನೆಯಲ್ಲಿಯೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ಪಿಐ ಎಂ.ಡಿ ಫೈಜುಲ್ಲಾ ಭೇಟಿ ನೀಡಿ, ಪರಿಶೀಲಿಸಿದರು. ಆರೋಪಿ ಚೇತನ್‌ಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.