ಬೆಂಗಳೂರು:- ಕನ್ನಡಿಗರಿಗೆ ಅವಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೋರಮಂಗಲದ ಜಿ.ಎಸ್ ಸೂಟ್ ಹೋಟೆಲ್ ಸೀಜ್ ಮಾಡಲಾಗಿದೆ. ಅಲ್ಲದೇ ಹೋಟೆಲ್ ಮ್ಯಾನೇಜರ್ ನನ್ನು ಅರೆಸ್ಟ್ ಮಾಡಲಾಗಿದೆ. ಸರ್ಫಜ್ ಬಂಧಿತ ಮ್ಯಾನೇಜರ್. ಮ್ಯಾನೇಜರ್ ಅರೆಸ್ಟ್ ಮಾಡಿ ಜಿ.ಎಸ್ ಸೂಟ್ ಹೋಟೆಲ್‌ಗೆ ಮಡಿವಾಳ ಪೊಲೀಸರು ಬೀಗ ಹಾಕಿದ್ದಾರೆ. ಹೊಟೇಲ್ ಮಾಲೀಕ ಜಮ್‌ಶದ್ ಮೇಲೂ ಎಫ್‌ಐಆರ್ ದಾಖಲಿಸಲಾಗಿದೆ.
ಜಿ.ಎಸ್ ಸೂಟ್ ಹೋಟೆಲ್‌ನ ಹೊರಭಾಗದ ಎಲ್‌ಇಡಿ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಅವಹೇಳನಕಾರಿ ಬರಹ ಪ್ರದರ್ಶಿಸಲಾಗಿತ್ತು. ಸ್ಥಳೀಯರು ಅದನ್ನು ಗಮನಿಸಿ ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದರು. ಹೋಟೆಲ್‌ನ ಈ ನಡೆಗೆ ಕನ್ನಡಿಗರು ಅಸಮಾಧಾನ ಹೊರಹಾಕಿದ್ದರು. ಎಚ್ಚೆತ್ತ ಮಡಿವಾಳ ಪೊಲೀಸರು, ಹೋಟೆಲ್ ಮಾಲೀಕ ಜಮ್‌ಶದ್ ಮತ್ತು ಸರ್ಫರಾಜ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಹೋಟೆಲ್ ಮ್ಯಾನೇಜರ್ ನನ್ನು ಅರೆಸ್ಟ್ ಮಾಡಿ ತನಿಖೆ ಕೈಗೊಂಡಿದ್ದಾರೆ.